ಆಲಂಕಾರು: ಆರುವಾರ ಬಾಳಿಕೆ ಹರಿಣಾಕ್ಷಿ ಆರ್.ರೈ ಯವರ ಶ್ರದ್ಧಾಂಜಲಿ ಕಾರ್ಯಕ್ರಮ ಉಪ್ಪಿನಂಗಡಿ ಸಹಸ್ರ ಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.
ಪುತ್ತೂರು ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಹರಿಣಾಕ್ಷಿ ಆರ್.ರೈ ಯವರಿಗೆ ನುಡಿನಮನ ಸಲ್ಲಿಸಿ ಹರಿಣಾಕ್ಷಿ ಆರ್.ರೈ ಯವರು 1953 ಜನಿಸಿ , ಶಿಕ್ಷಣವನ್ನು ಗೇರುಕಟ್ಟೆಯಲ್ಲಿ ಮುಗಿಸಿದ ನಂತರ 1974 ರಲ್ಲಿ ಕೇನ್ಯ ರಘನಾಥ ರೈ ಯವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಮೂರು ಮಕ್ಕಳಿಗೆ ಜನ್ಮ ನೀಡಿ ಆದರ್ಶ ಜೀವನ ನಡೆಸಿದವರು. ಮನುಷ್ಯ ಹುಟ್ಟುವಾಗ ಉಸಿರು ಇರುತ್ತದೆ ಸಾಯುವಾಗ ಹೇಸರು ಇರುತ್ತದೆ .ಹುಟ್ಟು ಸಾವಿನ ನಡುವೆ ಮಾಡಿದ ಸಾಧನೆ ಮಾತ್ರ ಶಾಶ್ವತ ವಾಗಿ ಉಳಿಯುತ್ತದೆ. ಹರಿಣಾಕ್ಷಿ ಆರ್.ರೈ ಯವರು ಆದರ್ಶ ಜೀವನ ನಡೆಸಿ ಮಕ್ಕಳಿಗೆ ಸುಸಂಸ್ಕೃತ ಜೀವನ ನಡೆಸಲು ಪ್ರೇರಪಣೆ ಕೊಟ್ಟವರು.ಹರಿಣಾಕ್ಷಿ ಆರ್.ರೈ ಯವರ ಪತಿ ಕೇನ್ಯ ರಘನಾಥ ರೈ ಯವರು ಶಿಕ್ಷಕರಾಗಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಸಂಧರ್ಭದಲ್ಲಿ ಹರಿಣಾಕ್ಷಿ ಆರ್.ರೈ ಯವರು ಮನೆಯಲ್ಲಿರುವ ಕೃಷಿಯನ್ನು ಅಭಿವೃದ್ಧಿ ಪಡಿಸಿದವರು ಮತ್ತು ಮನೆಗೆ ಬಂದಂತಹ ಅತಿಥಿಗಳನ್ನು ಸತ್ಕರಿಸಿ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಎಲ್ಲರ ಪ್ರೀತಿ, ವಿಶ್ವಾಸಗಳಿಸಿದವರು.2024 ರಲ್ಲಿ ವಿವಾಹದ ಸುವರ್ಣ ಮಹೋತ್ಸವ ಆಚರಣೆಯನ್ನು ಮಾಡಿದವರು ಎಂದು ತಿಳಿಸಿ ದಿ.ಹರಿಣಾಕ್ಷಿ ಆರ್.ರೈಯವರು ಮಕ್ಕಳಾದ ದಿನೇಶ್ ಕುಮಾರ್ ದೈಹಿಕ ಉಪನ್ಯಾಸಕರಾಗಿ,ಡಾ!. ಲಕ್ಷ್ಮೀಶ ರೈಯವರು ಇಂಜೀನಿಯರ್ ಆಗಿ ಚೈನಾದಲ್ಲಿ, ನೀರಾಜ್ ಕುಮಾರ್ ರೈ ಯವರು ಕೃಷಿಕರಾಗಿ,ಉದ್ಯಮಿಗಳಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ,ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ,ಇದೀಗ ಅತೂರು ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿ ಅಗಲಿದ ಹರಿಣಾಕ್ಷಿ ಜೆ.ರೈಯವರ ಅತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.

ನಂತರ ಮೃತರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ಬಂಧು ಮಿತ್ರರು ಹರಿಣಾಕ್ಷಿ ಆರ್.ರೈ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಲೋಕನಾಥ ರೈ ಕೇಲ್ಕ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಮೃತರ ಪತಿ ಕೇನ್ಯ ರಘುನಾಥ ರೈ, ಸೊಸೆ ಸಾರಿಕ, ಮಗ ದಿನೇಶ್ ಕುಮಾರ್ ರೈ,ಸೊಸೆ ರಂಜಿತಾ, ಮಗ ನೀರಜ್ ಕುಮಾರ್ ರೈ, ವತ್ಸಲಾ ಡಿ. ಶೆಟ್ಟಿ, ಶೋಭಾ, ಡಾ. ಸುರೇಶ್ ಕುಮಾರ್ ಶೆಟ್ಟಿ,ಶಾರದಾ, ಕರುಣಾಕರ ಶೆಟ್ಟಿ,ಶಾಂತಾ, ಪ್ರಭಾಕರ ಶೆಟ್ಟಿ ಅಮಿತ್ ಶೆಟ್ಟಿ, ಸುಭಾಷಿಣಿ, ಸಚಿನ್ ಶೆಟ್ಟಿ, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆರುವಾರ ಬಾಳಿಕೆ ಪುರಂದರ ರೈ,ಸುಭಾಸ್ ಶೆಟ್ಟಿ, ಸುನೀತ್ ರಾಜ್ ಶೆಟ್ಟಿ, ದಯಾನಂದ ರೈ, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು,ರೋಟರಿ ಜಿಲ್ಲೆ ಪೂರ್ವ ಗೌವರ್ನರ್, ಪ್ರಕಾಶ್ ಕಾರಂತ್,ಡಾ.ಕೆ.ಜಿ ಭಟ್, ಡಾ!.ರಾಜರಾಮ್ ಕೆ.ಬಿ, ಬಂಟರಯಾನೆ ನಾಡವರ ಮಾತೃಸಂಘ ಮಂಗಳೂರಿನ ಪುತ್ತೂರು ತಾಲ್ಲೂಕು ಸಮಿತಿಯ ಮಾಜಿ ಸಂಚಾಲಕರಾದ ದಯಾನಂದ ರೈ ಮನವಳಿಕೆಗುತ್ತು,ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಸೇಸಪ್ಪ ರೈ.ಕೆ,ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ ಸೇರಿದಂತೆ ಹರಿಣಾಕ್ಷಿ ಆರ್.ರೈ ಯವರು ಕುಟುಂಬಸ್ಥರು,ಬಂಧು ಮಿತ್ರರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.