ಉಪ್ಪಿನಂಗಡಿ: 150 ವರ್ಷಗಳಿಗೂ ಅಧಿಕ ಇತಿಹಾಸವುಳ್ಳ ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯವನ್ನು ಶಿಲಾಮಯಗೊಳಿಸಿ ಜೀರ್ಣೋದ್ಧಾರ ಮಾಡಲು ಯೋಜನೆ ಹಾಕಿಕೊಳ್ಳಲಾಗಿದ್ದು, ಇದಕ್ಕಾಗಿ ದೇವಾಲಯಕ್ಕೆ ಆಗಮಿಸಿದ ಶಿಲೆಗಳ ಪುರ ಪ್ರವೇಶವನ್ನು ಜಿಎಸ್ಬಿ ಸಮುದಾಯವರು ಭವ್ಯ ಸ್ವಾಗತದೊಂದಿಗೆ ಬರ ಮಾಡಿಕೊಂಡರು.
ರಥಬೀದಿಯಲ್ಲಿ ಭವ್ಯ ಮೆರವಣಿಗೆಯಲ್ಲಿ ಸರ್ವ ಅಲಂಕೃತವಾಗಿ ಬಂದ ಶಿಲೆಗಳಿಗೆ ದೇವಾಲಯದ ಆಡಳಿತ ಮೊಕ್ತೇಸರ ಬಿ.ಗಣೇಶ ಶೆಣೈ ಹಾಗೂ ಸಾಹುಕಾರ ಭಟ್ ಮನೆತನದ ಇಂದಿರಾ ವೆಂಕಟೇಶ ಭಟ್ ಅವರು ಪುಷ್ಟ ಮಾಲೆಗಳನ್ನು ಸಮರ್ಪಿಸುವ ಮೂಲಕ ಸ್ವಾಗತಿಸಿದರು. ಶ್ರೀ ದೇವಾಲಯದ ತಂತ್ರಿಗಳಾದ ಪಿ.ಸುಬ್ರಹ್ಮಣ್ಯ ಭಟ್ ಹಾಗೂ ಪ್ರಧಾನ ಅರ್ಚಕ ರವೀಂದ್ರ ಭಟ್ ಧಾರ್ಮಿಕ ವಿಧಿ- ವಿಧಾನ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮೊಕ್ತೇಸರರಾದ ಕೆ. ಅನಂತರಾಯ ಕಿಣಿ, ಯು. ನಾಗರಾಜ ಭಟ್, ಪಿ. ದೇವಿದಾಸ್ ಭಟ್, ಡಾ. ಯಂ. ರತ್ನಾಕರ ಶೆಣೈ, ಪ್ರಮುಖರಾದ ಎಚ್. ವಾಸುದೇವ ಪ್ರಭು, ಕರಾಯ ಗಣೇಶ ನಾಯಕ್, ಸತೀಶ ನಾಯಕ್, ಗಿರಿಧರ್ ನಾಯಕ್, ನಂದಾವರ ಯೋಗೀಶ್ ಶೆಣೈ, ನೀನಿ ಸಂತೋಷ ಕಾಮತ್, ಶಾಂತರಾಮ ಶೆಣೈ, ವೆಂಕಟೇಶ ಕಿಣಿ, ಡಾ.ಯು ದಾಮೋದರ ನಾಯಕ್, ಎಚ್.ಅಚ್ಯುತ ಪ್ರಭು, ಕೆ. ದಾಮೋದರ ಪ್ರಭು, ವೈ ವೆಂಕಟೇಶ ಶೆಣೈ ಉಪಸ್ಥಿತರಿದ್ದರು. ದೇವಾಲಯದ ವ್ಯವಸ್ಥಾಪಕರಾದ ಕೆ.ರಾಮಕೃಷ್ಣ ಪ್ರಭು ಹಾಗೂ ಎ. ಮಂಜುನಾಥ ನಾಯಕ್ ಸಹಕರಿಸಿದರು.