ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಮಹೋತ್ಸವ, ಜಾತ್ರೋತ್ಸವ ಆಮಂತ್ರಣ ಬಿಡುಗಡೆ

0

ನ.18 : ಗೊನೆ ಮುಹೂರ್ತ -ನ.25-26 : ಪಂಚಮಿ,ಚಂಪಾ ಷಷ್ಠೀ ಮಹೋತ್ಸವ, ಜಾತ್ರೋತ್ಸವ

ಪುತ್ತೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.25-26ರಂದು ನಡೆಯಲಿರುವ ಪಂಚಮಿ,ಚಂಪಾ ಷಷ್ಠಿ ಮಹೋತ್ಸವ ,ಜಾತ್ರೋತ್ಸವದ ಆಮಂತ್ರಣ ಬಿಡುಗಡೆ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಅರ್ಚಕ ಪ್ರವೀಣ್ ಶಂಕರ್ ಅವರು ಪೂಜಾ ಕೈಂಕರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲು,ಮೊಕ್ತೇಸರರಾದ ಮೋಹನ್‌ದಾಸ ರೈ ನಳೀಲು, ಕಿಶೋರ್ ಕುಮಾರ್ ರೈ, ಸತೀಶ್ ರೈ ನಳೀಲು, ಪ್ರವೀಣ್ ಕುಮಾರ್ ರೈ ನಳೀಲು ,ಅರುಣ್ ಕುಮಾರ್ ರೈ ,ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ , ಸಂತೋಷ್ ಕುಮಾರ್ ರೈ ಇಳಂತಾಜೆ ,ವಿಲಾಸ್ ರೈ ಪಾಲ್ತಾಡು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು,ಕಾರ್ಯದರ್ಶಿ ಪ್ರವೀಣ್ ಕುಮಾರ್, ಜತೆ ಕಾರ್ಯದರ್ಶಿ ಕಿರಣ್ ಕೆ.,ಕೋಶಾಧಿಕಾರಿ ಸುಧಾಕರ ರೈ ಪಾಲ್ತಾಡಿ ಹೊಸಮನೆ, ಆಮಂತ್ರಣ ಮತ್ತು ಪ್ರಚಾರ ಸಮಿತಿಯ ಉಮೇಶ್ ನಾಯ್ಕ ಮರುವೇಲು,ವೈದಿಕ ಸಮಿತಿಯ ರಾಮಣ್ಣ ರೈ ಬಾಕಿಜಾಲು,ಗೋಪಾಲ ಆಚಾರ್ಯ,ಭಜನಾ ಸೇವಾ ಸಮಿತಿಯ ಧನಂಜಯ ಕಾಯರಗುರಿ,ಹೊರೆಕಾಣಿಕೆ ಮಣಿಕ್ಕರ ವಲಯ ಸಮಿತಿಯ ಅಮರನಾಥ ರೈ ಬಾಕಿಜಾಲು,ಪಾಲ್ತಾಡಿ ಧರ್ಮರಸು ಉಳ್ಳಾಕುಲು ದೈವಸ್ಥಾನ ವಲಯದ ಪದ್ಮಪ್ರಸಾದ್ ರೈ ಕಲಾಯಿ,ತಾರಾನಾಥ ಬೊಳಿಯಾಲ,ಗುರುಪ್ರಸಾದ್ ಸೇರಿದಂತೆ ವಿವಿಧ ಸಮಿತಿ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here