ಪುತ್ತೂರು: ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಸಲ್ಯವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ನ ಅಂತಿಮ ವರ್ಷದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ ಹಾಗೂ ಮಕ್ಯಾನಿಕಲ್ವಿಭಾಗದ ವಿದ್ಯಾರ್ಥಿಗಳಿಗೆ 2 ದಿನಗಳ ಇಂಡಸ್ಟ್ರಿಯಲ್ ರೋಬೋಟಿಕ್ಸ್ ಎಂಬ ವಿಷಯದಲ್ಲಿ ಪ್ರಾತ್ಯಕ್ಷತೆ ಸಹಿತ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ಮೂಡಬಿದ್ರೆಯ ವಿಸ್ತ್ರುತ ಟೆಕ್ನಾಲಜಿ ಪ್ರೈ. ಲಿಮಿಟೆಡ್ ನ ಪ್ರಜ್ವಲ್ ಆಂದನೂರು, ಸಂಪ್ರದ ಭಂಡಾರಿ ಹಾಗೂ ಸುದೀಪ್.ಪಿ.ಯಂ ವಿದ್ಯಾರ್ಥಿಗಳಿಗೆ ರೋಬೋಟ್ನೊಂದಿಗೆ ತರಬೇತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಮುರಳಿಧರ್.ಯಸ್ ಹಾಗೂ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಹಾಗೂ ಮಕ್ಯಾನಿಕಲ್ವಿಭಾಗದಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ವಿಭಗದ ಹಿರಿಯ ಉಪನ್ಯಸಕಿ ಉಷಾಕಿರಣ್ .ಯಸ್,ಯಂ ಕಾರ್ಯಕ್ರಮ ಆಯೋಜಿಸಿ ನಿರೂಪಿಸಿದರು.