ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಡಿಚ್ಚಾರು ಪಲ್ಲ ಮದಕ ಅಮೃತ ಸರೋವರ ಸಮೀಪ ಇತ್ತೀಚೆಗೆ ಮೈಸೂರುನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಲಾರಿಯೊಂದರಿಂದ ಕಸದ ರಾಶಿ ಸುರಿದ ಘಟನೆ ನಡೆದಿತ್ತು.
ಈ ಸಂದರ್ಭದಲ್ಲಿ ಲಾರಿಯ ನಂಬರ್ ನೋಟ್ ಮಾಡಿದ ಸ್ಥಳೀಯರಾದ ಸತ್ಯಾವತಿ ಮಡ್ಯಂಗಳ ಈ ಬಗ್ಗೆ ಪಂಚಾಯತ್ ಗೆ ಮಾಹಿತಿ ನೀಡಿದರು.ಈ ಕುರಿತು ವಿಚಾರಿಸಿದಾಗ ಲಾರಿಯ ಮಾಲೀಕರು ತಪ್ಪೊಪ್ಪಿಕೊಂಡು ಸ್ಥಳದಿಂದ ಕಸವಿಲೇವಾರಿ ಮಾಡಿ ರೂ5000 ದಂಡ ಕಟ್ಟಿದ ಘಟನೆಯೊಂದು ನಡೆದಿದೆ.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಕಾರ್ಯದರ್ಶಿ ವಿದ್ಯಾಧರ್ ಉಪಸ್ಥಿತರಿದ್ದರು.ಸ್ಥಳೀಯ ರಿಕ್ಷಾ ಚಾಲಕ ಮೋಹನ್ ಗೌಡ ಮತ್ತು ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.