ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದಿಂದ ವಿದ್ಯಾನಿಧಿ-ಧನ ಸಹಾಯ ವಿತರಣಾ ಸಮಾರಂಭ: 250 ವಿದ್ಯಾರ್ಥಿಗಳಿಗೆ ತಲಾ ರೂ.2ಸಾವಿರ ವಿತರಣೆ

0

-ಮಕ್ಕಳ ಕಲಿಕೆಗೆ ವಿನಿಯೋಗ ಮಾಡಬೇಕು- ಕೆ.ಜೈರಾಜ್ ಬಿ.ರೈ
-ಸೀತಾರಾಮ ರೈಯವರ ಶ್ರಮವನ್ನು ನಾವೆಲ್ಲ ಮೆಚ್ಚಬೇಕು- ಶಶಿಕುಮಾರ್ ರೈ
-ವಿದ್ಯಾನಿಧಿ-ಧನಸಹಾಯ ಯೋಜನೆ ಭಾರೀ ಪ್ರಯೋಜನ- ಎ.ಕೆ.ಜಯರಾಮ ರೈ
-ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆ- ಸೀತಾರಾಮ ರೈ

ಪುತ್ತೂರು: ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ವರ್ಷಂಪ್ರತಿಯಂತೆ ಸಂಘದ ಧರ್ಮಾರ್ಥ’ ಮತ್ತುವಿದ್ಯಾಸಂಸ್ಥೆ’ ನಿಧಿಯಿಂದ ಧನಸಹಾಯ ವಿತರಣೆ ನೀಡುವ ವಿಶೇಷ ಕಾರ್ಯಕ್ರಮ ಸೆ. 13 ರಂದು ದರ್ಬೆ ಪ್ರಶಾಂತ್ ಮಹಲ್ ಸನ್ನಿಧಿ ಹಾಲ್‌ನಲ್ಲಿ ನಡೆಯಿತು.

ಮಕ್ಕಳ ಕಲಿಕೆಗೆ ವಿನಿಯೋಗ ಮಾಡಬೇಕು- ಕೆ.ಜೈರಾಜ್ ಬಿ.ರೈ
ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ.ರೈಯವರು ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಕಲಿಯುವ ಬಡ ಮಕ್ಕಳ ಕಲಿಕೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸವಣೂರು ಕೆ. ಸೀತಾರಾಮ ರೈಯವರು ತಮ್ಮ ಅದರ್ಶ ಸಹಕಾರ ಸಂಸ್ಥೆಯ ಮೂಲಕ ವಿದ್ಯಾನಿಧಿ- ಧನಸಹಾಯ ಯೋಜನೆಯನ್ನು ಅರಂಭಿಸಿರುವುದು ತುಂಬಾ ಪುಣ್ಯದ ಕೆಲಸವಾಗಿದ್ದು, ಈ ಹಣವನ್ನು ಪೋಷಕರು ತಮ್ಮ ಮಕ್ಕಳ ಕಲಿಕೆಗೆ ವಿನಿಯೋಗ ಮಾಡಬೇಕು ಎಂದು ಹೇಳಿದರು.

ಸೀತಾರಾಮ ರೈಯವರ ಶ್ರಮವನ್ನು ನಾವೆಲ್ಲ ಮೆಚ್ಚಬೇಕು- ಶಶಿಕುಮಾರ್ ರೈ
ಅಧ್ಯಕ್ಷತೆ ವಹಿಸಿದ್ದ ದ.ಕ,ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಅಪಾರವಾದ ಅನುಭವನ್ನು ಹೊಂದಿರುವ ಸವಣೂರು ಸೀತಾರಾಮ ರೈಯವರು ತಮ್ಮ ಬಾಲ್ಯ ಜೀವನದಲ್ಲಿ ತುಂಬಾ ಕಷ್ಟಪಟ್ಟು ಓದಿ, ಇಂದು ಉನ್ನತವಾದ ಸ್ಥಾನದಲ್ಲಿ ಇದ್ದಾರೆ. ಅವರು ತಮ್ಮ ಆದರ್ಶ ಸಹಕಾರ ಸಂಸ್ಥೆಯ ಮೂಲಕ ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವಾಗಬೇಕೆಂಬ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಭಮಾಡಿರುವುದು ಉತ್ತಮವಾದ ಕಾರ್‍ಯವಾಗಿದೆ ಎಂದರು. ಅದರ್ಶ ಸಹಕಾರ ಸಂಸ್ಥೆಯನ್ನು ಅದರ್ಶಯುತವಾಗಿ ಬೆಳೆಸಿರುವ ಸವಣೂರು ಸೀತಾರಾಮ ರೈಯವರ ಶ್ರಮವನ್ನು ನಾವೆಲ್ಲರೂ ಮೆಚ್ಚಬೇಕೆಂದು ಹೇಳಿದರು.

ವಿದ್ಯಾನಿಧಿ-ಧನಸಹಾಯ ಯೋಜನೆ ಭಾರೀ ಪ್ರಯೋಜನ- ಎ.ಕೆ.ಜಯರಾಮ ರೈ
ಕೆಯ್ಯೂರು ಶ್ರೀ ಮಹಷಿಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ.ಜಯರಾಮ ರೈಯವರು ಮಾತನಾಡಿ ಮಧ್ಯಮ ವರ್ಗದ ಮಕ್ಕಳು ಹೆಚ್ಚಾಗಿ ಕಲಿಯುತ್ತಿರುವ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸವಣೂರು ಸೀತಾರಾಮ ರೈಯವರು ಪ್ರಾರಂಭಮಾಡಿರುವ ವಿದ್ಯಾನಿಧಿ-ಧನಸಹಾಯ ಯೋಜನೆ ಭಾರೀ ಪ್ರಯೋಜನವಾಗಿದೆ. ಸೀತಾರಾಮ ರೈಯವರು ಆದರ್ಶ ಸಹಕಾರ ಸಂಸ್ಥೆಯನ್ನು ಜಿಲ್ಲಾ ಮಟ್ಟದಲ್ಲಿ ಉತ್ತಮ ರೀತಿಯಲ್ಲಿ ಕಟ್ಟಿ ಬೆಳಿಸಿದ್ದಾರೆ. ಈ ಸಂಸ್ಥೆಯ ಮೂಲಕ ಮತ್ತಷ್ಟು ಸೇವಾಕಾರ್‍ಯ ನಡೆಯಲಿ ಎಂದು ಆಶಿಸಿದರು.

ಚಿತ್ರ- ಕೃಷ್ಣ ಪುತ್ತೂರು

ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆ- ಸೀತಾರಾಮ ರೈ
ಸಂಘದ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಆದರ್ಶ ಸಹಕಾರ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮಂಗಳೂರು ಮತ್ತು ಈಶ್ವರಮಂಗಲದಲ್ಲಿ ಶಾಖೆಗಳನ್ನು ಅರಂಭಿಸಲಿದೆ. ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಬಿಸಿದ್ದೇವೆ ಎಂದರು.


ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು, ನಿರ್ದೇಶಕ ಅಶ್ವಿನ್ ಎಲ್.ಶೆಟ್ಟಿ, ಮಹಾಪ್ರಬಂಧಕ ವಸಂತ ಜಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿ.ಮಹಾಬಲ ರೈ, ಬಾಪು ಸಾಹೇಬ್ ಎಸ್.ಎಂ ಅತಿಥಿಗಳನ್ನು ಗೌರವಿಸಿದರು. ಶ್ರಮಿತಾ ಪ್ರಾರ್ಥಿಸಿದರು, ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿ ವಂದಿಸಿದರು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಕಾರ್‍ಯಕ್ರಮ ನಿರೂಪಿಸಿದರು. ಅದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಸಹಾಯಕ ಪ್ರಬಂಧಕ ಸುನಾದ್‌ರಾಜ್ ಶೆಟ್ಟಿ ಮತ್ತು ಸಿಬ್ಬಂದಿಗಳು ಕಾರ್‍ಯಕ್ರಮದಲ್ಲಿ ಸಹಕರಿಸಿದರು.

ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ಮನೆಗೆ
ಸಂಘವು ತನ್ನ ಸಾಮಾಜಿಕ ಕಾರ್ಯದ ಮೂಲಕ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಮತ್ತು ಕಡಬ ತಾಲೂಕಿನ ಸಂಘದ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಆಯ್ದ ಸರಕಾರಿ ಶಾಲೆಗಳಲ್ಲಿ 8ನೇ ಮತ್ತು 9ನೇ ತರಗತಿಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ಶಾಲಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 250 ವಿದ್ಯಾರ್ಥಿಗಳಿಗೆ ತಲಾ ರೂ. 2 ಸಾವಿರ ನೀಡಲಾಯಿತು.ವಿದ್ಯಾರ್ಥಿಗಳನ್ನು ಆಯಾ ಶಾಖೆಯಿಂದ ಶಾಖೆಯ ನೇತೃತ್ವದಲ್ಲೆ ವ್ಯಾನ್ ಮೂಲಕ ಕರೆ ತಂದು ಅವರಿಗೆ ವಿದ್ಯಾರ್ಥಿ ವೇತನ ನೀಡಿದ ಬಳಿಕ ಅವರನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನೂ ಸಂಘದ ಮೂಲಕ ಮಾಡಲಾಗುತ್ತಿದೆ.ಒಟ್ಟಿನಲ್ಲಿ ಸಂಘದ ಮೂಲಕ ನೀಡಿದ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ಮನೆಗೆ ತಲುಪಬೇಕೆಂಬ ನಿಟ್ಟಿನಲ್ಲಿ ಈ ಯೋಜನೆ ಮಾಡಲಾಗುತ್ತಿದೆ
-ಕೆ.ಸೀತಾರಾಮ ರೈ ಸವಣೂರು
ಅಧ್ಯಕ್ಷರು ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಪುತ್ತೂರು

LEAVE A REPLY

Please enter your comment!
Please enter your name here