ಪುತ್ತೂರು: ಶ್ರೀ ಕೃಷ್ಣ ಸೇವಾ ಟ್ರಸ್ಟ್ ಪುತ್ತೂರು ವಲಯ ಕಡಬ ತಾಲ್ಲೂಕು ಇದರ ಮಹಾಸಭೆಯು ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಜರಗಿತು.
ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವೀರಮಂಗಲ ಪಿಎಂಶ್ರೀ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಇವರಿಗೆ ಗೌರವ ಸನ್ಮಾನವು ನಡೆಯಿತು. ಸಂಘದ ಅಧ್ಯಕ್ಷ ವಾಸುದೇವ ಇಡ್ಯಾಡಿ, ಕಾರ್ಯದರ್ಶಿ ಶ್ರೀಧರ ಇಡ್ಯಾಡಿ, ಪದಾಧಿಕಾರಿಗಳಾದ ಆನಂದ ಸವಣೂರು, ಜಗದೀಶ್ ಇಡ್ಯಾಡಿ ಮತ್ತು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.