ಪುತ್ತೂರು: ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಮಂಗಳೂರು ಸುಬ್ರಹ್ಮಣ್ಯ ಮಧ್ಯೆ ವಿದ್ಯುತ್ ಚಾಲಿತ ರೈಲು ಸೆ.15 ರಿಂದ ಆರಂಭಗೊಂಡಿದೆ.
ಬೆಳಗ್ಗೆ ಪುತ್ತೂರಿನಲ್ಲಿ ಸ್ವಾಗತಿಸಲಾಯಿತು. ಬೆಳಗ್ಗೆ ಸುಬ್ರಹ್ಮಣ್ಯಕ್ಕೆ ಹೋಗಿ ಪುತ್ತೂರಿಗೆ ಸುಮಾರು 9 ಗಂಟೆಗೆ ಆಗಮಿಸಿ ಮಂಗಳೂರಿಗೆ ತೆರಳಿದೆ. ಮಂಗಳೂರು- ಸುಬ್ರಹ್ಮಣ್ಯ ರೋಡ್ ಮಧ್ಯೆ ಬೆಳಗ್ಗೆ ಮಧ್ಯಾಹ್ನ ಮತ್ತು ಸಂಜೆ ಪ್ಯಾಸೆಂಜರ್ ರೈಲು ಸೇವೆ ಇದ್ದು, ಡೀಸೆಲ್ ಮೂಲಕ ರೈಲು ಓಡುತ್ತಿತ್ತು. ಇದೀಗ ವಿದ್ಯುತ್ ಇಂಜಿನ್ನಲ್ಲಿ ಓಡಲು ಆರಂಭಿಸಿದೆ.