ಪುತ್ತೂರು: ಪುತ್ತೂರು ತಾಲೂಕು ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ ರೈ ಅದ್ಯಕ್ಷತೆಯಲ್ಲಿ ಮಾಸಿಕ ಸಭೆಯು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರಭವನದಲ್ಲಿ ಜರಗಿತು.

ಬಂಟರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ , ಮಾಜಿ ಕಾರ್ಯದರ್ಶಿ ಮೋಹನ್ ರೈ ನರಿಮೊಗರು, ಮಹಿಳಾ ಬಂಟರ ವಿಭಾಗದ ನಿಕಟಪೂರ್ವ ಅಧ್ಯಕ್ಷೆ ಸಬಿತ ಭಂಡಾರಿ, ಉಪಾಧ್ಯಕ್ಷರಾದ ಕೃಷ್ಣವೇಣಿ ಕೆ ರೈ, ಶಿಲ್ಪಾ ಎಚ್ ರೈ, ಕ್ರೀಡಾ ಸಂಚಾಲಕಿ ಸ್ವರ್ಣಲತಾ ಜೆ ರೈ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ನಿರ್ದೇಶಕಿ ವಾಣಿ ಎಸ್ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವು, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಪದಾಧಿಕಾರಿಗಳಾದ ಗಣೇಶ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ದಯಾನಂದ ರೈ ಕೊರ್ಮoಡ, ಮನ್ಮಥ ಶೆಟ್ಟಿ, ಯುವ ವಿಭಾಗದ ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಯಶುಭಾ ರೈ, ವಿಶೇಷ ಆಹ್ವಾನಿತರಾದ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಬಂಟರ ಸಂಘದ ನಿರ್ದೇಶಕಿ ಹರಿಣಾಕ್ಷಿ ಜೆ ಶೆಟ್ಟಿ, ಹಾಗೂ ಮಹಿಳಾ ವಿಭಾಗದ ಉಪಾಧ್ಯಕ್ಷರು, ಜತೆ ಕಾರ್ಯದರ್ಶಿಗಳು, ಗೌರವ ಸಲಹೆಗಾರರು, ನಿರ್ದೇಶಕರು, ಖಾಯಂ ಸದಸ್ಯರು ಉಪಸ್ಥಿತರಿದ್ದರು.
ಮಾಸಿಕ ಸಭೆಯಲ್ಲಿ ಬಂಟೆರೆ ಆಟಿದ ಕೂಟದ ಖರ್ಚು ವೆಚ್ಚಗಳನ್ನು ಸಭೆಯ ಮುಂದಿಡಲಾಯಿತು. ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಬಂಟ ಸಹೋದರ ಸಹೋದರಿಯರನ್ನು ಸಭೆಯಲ್ಲಿ ಗೌರವಿಸಲಾಯಿತು. ಇತ್ತೀಚಿಗೆ ಮಂಗಳೂರು ಬಂಟ್ಸ್ ಹಾಸ್ಟೆಲ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಥ್ರೋ ಬಾಲ್ ಆಟದಲ್ಲಿ ಪ್ರಥಮ ಬಹುಮಾನ ಪಡೆಯಲು ಶ್ರಮಿಸಿದ ನಮ್ಮ ಮಹಿಳಾ ವಿಭಾಗದ ಕ್ರೀಡಾ ಸಂಚಾಲಕರಾದ ಸಬಿತ ಭಂಡಾರಿ. ಮತ್ತು ಸ್ವರ್ಣಲತಾ ಜೆ ರೈ ರವರನ್ನು ಗೌರವಿಸಲಾಯಿತು. ಮಹಿಳಾ ವಿಭಾಗದ ಉಪಾಧ್ಯಕ್ಷೆ ಶಿಲ್ಪಾ ಎಚ್ ರೈ ಇವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಶಶಿಕಲಾ ಎ ಶೆಟ್ಟಿ ಪ್ರಾರ್ಥಿಸಿದರು. ಹರಿಣಾಕ್ಷಿ ಜೆ ಶೆಟ್ಟಿ ವಂದಿಸಿದರು. ಮಹಿಳಾ ಬಂಟರ ವಿಭಾಗದ ತಾ| ಕಾರ್ಯದರ್ಶಿ ಕುಸುಮಾ ಪಿ.ಶೆಟ್ಟಿ ಕೆರೆಕ್ಕೋಡಿ ಕಾರ್ಯಕ್ರಮ ನಿರೂಪಿಸಿದರು. ರಾಜೀವಿ ವಿ.ಶೆಟ್ಟಿ ಕೆಡೆಂಜಿ. ರಂಜಿನಿ ಶೆಟ್ಟಿ, ರವಿ ಚಂದ್ರ ರೈ ಕುಂಬ್ರ, ಭಾಸ್ಕರ ರೈ ಸಹಕರಿಸಿದರು.