ಕಾಣಿಯೂರು: ರಾಜ್ಯ ಮಟ್ಟದಲ್ಲಿ ಕವನ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಬರಹದ ಮೂಲಕ ಹಲವಾರು ಬಹುಮಾನಗಳನ್ನು ಪಡೆದ ಹಾಗೂ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದ, ಯುವ ಪ್ರತಿಭೆ ಚಾರ್ವಾಕದ ಸುರೇಶ್ ಕುಮಾರ್ ಇವರು ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದ. ಕ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಇವರು ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಕವನ ವಾಚಿಸಿ ಹೆಸರು ದಾಖಲಾಗಿರುತ್ತದೆ. ಸುರೇಶ್ ಕುಮಾರ್ ಕಡಬ ತಾಲೂಕು ಚಾರ್ವಾಕ ಗ್ರಾಮದ ಪಾಲ್ತಿಲ ಕುಮಾರ್ ಮತ್ತು ಸರೋಜಿನಿ ದಂಪತಿ ಪುತ್ರ.