ವಾರ್ಷಿಕೋತ್ಸವ ಪ್ರಯುಕ್ತ ಕೊಡುಗೆ ಘೋಷಣೆ
ಚಿನ್ನಾಭರಣದಲ್ಲಿ ಪ್ರತಿ ಪವನಿನಲ್ಲಿ 4 ಸಾವಿರ ಕಡಿತ
ಬೆಳ್ಳಿಯಭರಣಕ್ಕೂ ಪ್ರತಿ ಗ್ರಾಂಗೆ 15 ರೂಪಾಯಿ ಕಡಿತ
ಪುತ್ತೂರು: 916 ಹಾಲ್ ಮಾರ್ಕ್ ಚಿನ್ನಾಭರಣಗಳ ಹಾಗೂ ಬೆಳ್ಳಿಯಭರಣಗಳ ಮಾರಾಟ ಮಳಿಗೆ ಕೋರ್ಟುರಸ್ತೆ ಅನಂತ ಗಣೇಶ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಶಿವಾಜಿ ಮಾರುತಿ ಸುರ್ವೆ ಮಾಲಕತ್ವದ ಶ್ರೀ ದುರ್ಗಾ ಲಕ್ಷ್ಮೀ ಜ್ಯುವೆಲ್ಲರ್ಸ್ ನಲ್ಲಿ ಗಣೇಶ ಚತುರ್ಥಿ ಹಾಗೂ ಸಂಸ್ಥೆಯ ವಾರ್ಷಿಕೋತ್ಸವ ಸಲುವಾಗಿ ಆಭರಣ ಪ್ರಿಯರಿಗೆ ಖರೀದಿಗೆ ಬೃಹತ್ ಉಳಿತಾಯ ಕೊಡುಗೆಯನ್ನು ಘೋಷಣೆ ಮಾಡಿದೆ.
ಕಳೆದ 4 ವರ್ಷಗಳಿಂದ ವ್ಯವಹರಿಸುತ್ತಿರುವ ಶ್ರೀ ದುರ್ಗಾ ಲಕ್ಷ್ಮೀ ಜ್ಯುವೆಲ್ಲರ್ಸ್ ಗ್ರಾಹಕ ವರ್ಗದ ಮೆಚ್ಚಿನ ವಿಶ್ವಾಸಾರ್ಹ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಮಳಿಗೆಯಲ್ಲಿ ನವ ನವೀನ ರೀತಿಯ ಚಿನ್ನಾಭರಣಗಳು ಹಾಗೂ ಬೆಳ್ಳಿಯ ಆಭರಣಗಳ ವಿಫುಲ ಸಂಗ್ರಹವಿದ್ದು , ಮೆಚ್ಚಿನ ಗ್ರಾಹಕ ಜನತೆಗೆ ಇದೀಗ ತನ್ನ 5ನೇಯ ವಾರ್ಷಿಕೋತ್ಸವ ಪ್ರಯುಕ್ತ ಪ್ರತಿ ಗಾಂ ಚಿನ್ನದ ಖರೀದಿ ಮೇಲೆ ರೂಪಾಯಿ 500 ಕಡಿತ ಘೋಷಣೆ ಮಾಡಿದ್ದು, ಒಂದು ಪವನ್ ಖರೀದಿಯಲ್ಲಿ ರೂಪಾಯಿ 4 ಸಾವಿರ ಉಳಿತಾಯ ಆಭರಣ ಪ್ರಿಯರ ಕೈ ಸೇರಲಿದೆ. ಇಷ್ಟು ಮಾತ್ರವಲ್ಲದೇ ಬೆಳ್ಳಿಯ ಖರೀದಿಗೂ ಪ್ರತಿ ಗ್ರಾಂ ನಲ್ಲೂ ರೂಪಾಯಿ 15 ರಂತೆ , ಒಂದು ಕೆ.ಜಿ ಬೆಳ್ಳಿ ಆಭರಣದ ಖರೀದಿಗೆ ರೂಪಾಯಿ 15 ಸಾವಿರ ಉಳಿತಾಯವು ಗ್ರಾಹಕರ ಜೇಬು ಸೇರಲಿದೆ.

ಸುಲಭ ಕಂತು ಪಾವತಿಯ ಮೂಲಕವೂ ಚಿನ್ನಾಭರಣಗಳ ಖರೀದಿಗೆ ಅವಕಾಶ ಕಲ್ಪಿಸಿರುವ ಸಂಸ್ಥೆಯು, ತಿಂಗಳಿಗೆ 500 ಅಥವಾ 1000 ರೂ ಪಾವತಿ ಮೂಲಕ ಎ ಹಾಗೂ ಬಿ ಗ್ರೂಪ್ ಆಯೋಜನೆ ಮಾಡಿದ್ದು , ಆಸಕ್ತ ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಮಾಲಕರು ವಿನಂತಿದ್ದಾರೆ. ಪ್ರತಿ ತಿಂಗಳು ಡ್ರಾ ವಿಜೇತರ ಆಯ್ಕೆ ನಡೆಯಲಿದ್ದು, ವಿಜೇತ ಸದಸ್ಯರೂ ಮತ್ತೆ ಕಂತು ಪಾವತಿ ಮಾಡುವ ಅಗತ್ಯವಿಲ್ಲವೆಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚೌತಿ ಹಾಗೂ ವಾರ್ಷಿಕೋತ್ಸವ ಕೊಡುಗೆ
ಒಂದು ಪವನ್ ಚಿನ್ನಾಭರಣ ಖರೀದಿಗೆ 4000-00 ಉಳಿತಾಯ
ಒಂದು ಕೆ.ಜಿ ಬೆಳ್ಳಿಯಭರಣ ಖರೀದಿಗೆ 15000-00 ಉಳಿತಾಯ
ಕೊಡುಗೆಗಳು ಸೀಮಿತಾವಧಿಗೆ ಮಾತ್ರ
ಕಂತು ಮೂಲಕವು ಆಭರಣಗಳ ಖರೀದಿಗೆ ಅವಕಾಶ.