ಕಲ್ಲಾರೆ ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ಪ್ರಸಕ್ತ ಸಾಲಿನಲ್ಲಿ ಸಹಕಾರಿಯ ಒಟ್ಟು ವ್ಯವಹಾರ 127 ಕೋಟಿ ರೂಪಾಯಿ
ಲಾಭ 12 ಲಕ್ಷ ರೂಪಾಯಿ – ಅಧ್ಯಕ್ಷ ದಾಮೋದರ್ ಕುಲಾಲ್ ಮಾಹಿತಿ

ಪುತ್ತೂರು : ಕಲ್ಲಾರೆ ಮಹಾಲಕ್ಷ್ಮೀ ಸಂಕೀರ್ಣದಲ್ಲಿ ಪ್ರಧಾನ ಕಛೇರಿ ಹೊಂದಿ, ಕಡಬದಲ್ಲಿ ಹಾಗೂ ಮೂಡಬಿದ್ರಿಯಲ್ಲಿ ಶಾಖೆ ಹೊಂದಿರುವಂತಹ ಶ್ರೀ ಮಾತಾ ಸೌಹಾರ್ದ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ಒಟ್ಟು 127 ಕೋಟಿ ವ್ಯವಹಾರವನ್ನು ನಡೆಸಿ, 12 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿಕೊಂಡಿದೆಯೆಂದು ಸಹಕಾರಿ ಅಧ್ಯಕ್ಷ ದಾಮೋದರ್ ಕುಲಾಲ್ ಮಾಹಿತಿ ನೀಡಿದರು.


ಸೆ.14 ರಂದು ಸಹಕಾರಿಯ ಸಭಾಂಗಣದಲ್ಲಿ ನಡೆದ ಒಂಭತ್ತನೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು , ಸಂಘದ ಸದಸ್ಯರ ಸಂಪೂರ್ಣ ಸಹಕಾರ , ನಿರ್ದೇಶಕರ ಸಲಹೆ ಸೂಚನೆ ಹಾಗೂ ಸಿಬಂದಿಗಳ ಪ್ರಾಮಾಣಿಕ ಸೇವೆಯಿಂದಲೇ ಸಂಘ ಅಭಿವೃದ್ಧಿ ಹಾದಿಯಲ್ಲಿ ಸಾಗಿದೆಯೆಂದು ಹರ್ಷ ವ್ಯಕ್ತಪಡಿಸಿದರು. ಸಂಘವು ಪ್ರಸಕ್ತ ಸಾಲಿನ ಅಂತ್ಯಕ್ಕೆ ಒಟ್ಟು 4173 ’ಎ’ ತರಗತಿಯ ಸದಸ್ಯರನ್ನು ಹೊಂದಿದೆ ಮತ್ತು ಈ ವರದಿ ಸಾಲಿನಲ್ಲಿ ರೂ 16 ಕೋಟಿಯಷ್ಟು ದುಡಿಯುವ ಬಂಡಾವಳವಿದ್ದು , ರೂ.10 ಕೋಟಿಯಷ್ಟು ಸಾಲವನ್ನು ನೀಡಿದ್ದು ಇದರಲ್ಲಿ ರೂ.9.1 ಕೋಟಿಯಷ್ಟು ಮೊತ್ತ
ವಸೂಲಾತಿ ನಡೆದಿದೆಯೆಂದರು. ಸಂಘದ ಎಲ್ಲಾ ಶಾಖೆಗಳಲ್ಲೂ ಗ್ರಾಹಕರ ಅನುಕೂಲತೆಗಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡ ಅಳವಡಿಸಲಾಗಿದೆ ಮಾತ್ರವಲ್ಲದೇ ಎಲ್ಲಾ ಸದಸ್ಯರಿಗೂ ಮೊಬೈಲ್ ಆ್ಯಪ್ ಮೂಲಕ ತ್ವರಿತ ಸೇವೆ , ಚಿನ್ನಾಭರಣಗಳ ಈಡಿನ ಮೇಲೆ ಅತೀ ಕಡಿಮೆ ಬಡ್ಡಿದರದಲ್ಲಿ ಗರಿಷ್ಠ ಸಾಲ ಮಂಜೂರಾತಿ , ನಿಶ್ಚಿತ ಠೇವಣಿಗಳ ಮೇಲೆ ಆತ್ಯಾಕರ್ಷಕ ಮೊತ್ತದ ಬಡ್ಡಿಯನ್ನು ನೀಡುವುದಾಗಿ ತಿಳಿಸಿದ ಅವರು , ಸಂಘದ ಸದಸ್ಯರ ಬಳಿಗೆ ಅತೀ ಶೀಘ್ರವಾಗಿ ಸಾಲ ವಿತರಿಸಲು ಯೋಜನೆ ರೂಪಿಸಲಾಗುವುದೆಂದು ಮಾಹಿತಿ ನೀಡಿ, ವಂದಿಸಿದರು. ಸಂಘದ ಉಪಾಧ್ಯಕ್ಷ ಅರುಣ್ ಕುಮಾರ್ ಆಳ್ವ , ನಿರ್ದೇಶಕರುಗಳಾದ ಭಾಸ್ಕರ್ ಎಂ , ಶಂಕರ ನಾರಾಯಣ ಭಟ್ , ವಸಂತ ಮೂಲ್ಯ ,ಶೇಶಪ್ಪ ನಾಯ್ಕ ,ಹುಸೈನ್ ,ಶಶಿಕಲಾ , ತುಂಗಮ್ಮ ,ಹೇಮಾವತಿ ಮತ್ತು ವಿದ್ಯಾ ಹಾಗೂ ಸದಸ್ಯರು ಮತ್ತು ಸಿಬಂದಿಗಳು ಹಾಜರಿದ್ದರು. ಸ್ವಸ್ತಿಕಾ ಪ್ರಾರ್ಥನೆ ನೆರವೇರಿಸಿ, ಕಾರ್ಯದರ್ಶಿ ಶರತ್ ಕುಮಾರ್ ಸ್ವಾಗತಿಸಿದರು.
ಮೇಘಾ ವಂದಿಸಿದರು.

ಸಹಕಾರಿಯ ಸೇವೆಗಳು….

ಸಹಕಾರಿಯಲ್ಲಿ ಇ -ಸ್ಟ್ಯಾಪಿಂಗ್ ಸೌಲಭ್ಯ , ನಿತ್ಯ ನಿಧಿ ,ಆವರ್ತ ಠೇವಣಿ ,ನಿರಖು ಠೇವಣಿ , ವಾಹನ ಸಾಲ ,ಅಡಮಾನ ಸಾಲವನ್ನೆಲ್ಲಾ ಆಕರ್ಷಕ ಬಡ್ಡಿ ದರದಲ್ಲಿ ಒದಗಿಸಲಾಗುವುದರ ಜೊತೆಗೆ ಆರೋಗ್ಯ ವಿಮೆ , ವಾಹನ ವಿಮೆ ಮತ್ತು ಸ್ವತ್ತುಗಳ ಮೇಲಿನ ವಿಮಾ ಸೌಲಭ್ಯ ಸೇವೆ ಲಭ್ಯವಿದೆಯೆಂದು ಅಧ್ಯಕ್ಷ ದಾಮೋದರ್ ಕುಲಾಲ್ ಮಾಹಿತಿ ನೀಡಿದರು.

ದಶಮಾನೋತ್ಸವ ಪ್ರಯುಕ್ತ ಠೇವಣಾತಿಗಳಿಗೆ ಅತ್ಯಾಕರ್ಷಕ ಬಡ್ಡಿ…!

ದಾಮೋದರ್ ಕುಲಾಲ್, ಅಧ್ಯಕ್ಷರು

ಹಕಾರಿ ಸಂಘವು ಇತ್ತೀಚೆಗೆ ದಶಮಾನೋತ್ಸವ ಸಂಭ್ರಮ ಆಚರಿಸಿಕೊಂಡಿದ್ದು , ಆ ಪ್ರಯುಕ್ತ ತನ್ನ ಗ್ರಾಹಕ ಬಂಧುಗಳಿಗೆ ವಿಶೇಷ ಕೊಡುಗೆ ಘೋಷಣೆ ಮಾಡಿದೆ. ಗ್ರಾಹಕರು ಇಡುವ ಠೇವಣಾತಿಗಳಿಗೆ ವರ್ಷಕ್ಕೆ 9.5% ಬಡ್ಡಿಯನ್ನು ನೀಡುತ್ತವೆ ಹಾಗೂ ಹಿರಿಯ ನಾಗರಿಕರಿಗೆ 0.5% ಅಧಿಕ ಬಡ್ಡಿ ಒದಗಿಸುತ್ತೇವೆ. ಆದರೇ ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ.
ದಾಮೋದರ್ ಕುಲಾಲ್, ಅಧ್ಯಕ್ಷರು

LEAVE A REPLY

Please enter your comment!
Please enter your name here