ತಮನ್ವಿ ಸಿಲ್ಕ್ಸ್ & ಸಾರೀಸ್ ಗ್ರಾಹಕರಿಗೆ ವಾರ್ಷಿಕೋತ್ಸವದ ವಿಶೇಷ ಕೊಡುಗೆ

0

ಪುತ್ತೂರು: ಬೊಳುವಾರಿನ ಮುಖ್ಯರಸ್ತೆಯಲ್ಲಿರುವ ಇನ್‌ಲ್ಯಾಂಡ್ ಮಯೂರ ಬಿಲ್ಡಿಂಗ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಗ್ರಾಹಕರಿಗೆ ನಗುಮುಖದ ಸೇವೆ ನೀಡುತ್ತಿರುವ ತಮನ್ವಿ ಸಿಲ್ಕ್ಸ್ ಮತ್ತು ಸಾರೀಸ್ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ವಾರ್ಷಿಕೋತ್ಸವದ ಪ್ರಯುಕ್ತ ಸೆ.16 ರಂದು ಗ್ರಾಹಕರಿಗೆ ಖರೀದಿ ಮೇಲೆ ಶೇ.10 ರಷ್ಟು ಡಿಸ್ಕೌಂಟ್ ಆಫರ್ ನೀಡಲಾಗುತ್ತಿದೆ.


ದುಪ್ಪಟ್ಟಾ, ಸಾರಿ ಶೇಪರ್, ಇನ್ನರ್‌ವೇರ್, ರೇಷ್ಮೆ ಸಿಲ್ಕ್, ಸೆಮಿ ಸಿಲ್ಕ್, ಬ್ರೈಡಲ್ ಸಾರಿ, ಕಾಟನ್ ಸಿಲ್ಕ್ ಸಾರಿಗಳು, ಬನಾರಸ್ ಸಾರಿಗಳು, ಸಲ್ವಾರ್ ಸೇರಿದಂತೆ ಮಹಿಳೆಯರ ವಿವಿಧ ಉಡುಪುಗಳು ಲಭ್ಯವಿದೆ. ವಿವಿಧ ವಿನ್ಯಾಸದ, ಕಡಿಮೆ ಬೆಲೆಯ ಉಡುಪುಗಳನ್ನು ಖರೀದಿಸಲು ಮಹಿಳೆಯರಿಗೆ ಅವಕಾಶವಿದೆ. ಡಿಸ್ಕೌಂಟ್ ಸೇಲ್ ಸೆ.16ರಂದು ಮಾತ್ರ ಇರುತ್ತದೆ. ಕಳೆದ ಎರಡು ವರ್ಷಗಳಿಂದ ನಮ್ಮನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ಗ್ರಾಹಕ ಬಂಧು-ಮಿತ್ರರಿಗೆ ಧನ್ಯವಾದಗಳು. ಮುಂದೆಯೂ ಇದೇ ರೀತಿಯ ಸಹಕಾರವನ್ನು ಬಯಸುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ 7899209597, 8246666617 ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here