ನಾಳೆ ನ.4ಕ್ಕೆ ಎಸ್‌ವೈಎಸ್ ಪುತ್ತೂರು ಝೋನ್‌ನ ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣಾ ಸಂಗಮ, ಸಂಘಟನಾ ತರಬೇತಿ

0

ಪುತ್ತೂರು: ಎಸ್‌ವೈಎಸ್ ಪುತ್ತೂರು ಝೋನ್‌ನ 7 ವಲಯಗಳಿಗೆ ಒಳಪಟ್ಟ ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣಾ ಸಂಗಮ ಹಾಗು ಸಂಘಟನಾ ತರಬೇತಿ ಕಾರ್ಯಕ್ರಮ ನ.4ರಂದು ಕುಂಬ್ರ ಪರ್ಪುಂಜದಲ್ಲಿರುವ ಅಬ್ರೋಡ್ ಮಲ್ಟಿಪ್ಲೆಕ್ಸ್ ಅಡಿಟೋರಿಯಂನಲ್ಲಿ ಸಂಜೆ ಗಂಟೆ 5.30ಕ್ಕೆ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ಲ ಕಾವು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಯುವ ಸಮೂಹವನ್ನು ದೇಶದ ಉತ್ತಮ ಪ್ರಜೆಗಳಾಗಿ ಪರಿವರ್ತಿಸಿ ಅವರಲ್ಲಿ ದೇಶ ಪ್ರೇಮ, ಉತ್ತಮ ಗುಣನಡತೆ, ಪರೋಪಕಾರಿ, ಸರ್ವಧರ್ಮ ಸಹಿಷ್ಣುತೆ, ಸೌಹಾರ್ದ ಮನೋಭಾವ ಸೃಷ್ಟಿಸಿ, ಆಧ್ಯಾತ್ಮಿಕವಾಗಿಯೂ ಅವರು ಉನ್ನತ ಮಟ್ಟದಲ್ಲಿ ತಲುಪಲು ಸಹಕಾರವಾಗುವ ಸಂಘಟನಾ ತರಬೇತಿ ನೀಡುವ ಎಸ್‌ವೈಎಸ್ ಮೂಲಕ ಈ ಕಾರ್ಯಕ್ರಮ ನಡೆಯಲಿದ್ದು, ಅಸ್ಸಯ್ಯದ್ ಉಮರ್ ಜಿಫ್ರಿ ತಂಙಳ್ ಮಲಪ್ಪುರಂ ಅವರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು, ದ.ಕ.ಈಸ್ಟ್ ಜಿಲ್ಲೆ ಎಸ್‌ವೈಎಸ್‌ನ ಅಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕೇರಳ ರಾಜ್ಯದ ಎಸ್‌ಎಸ್‌ಎಫ್‌ನ ಕೋಶಾಧಿಕಾರಿ ಅನಸ್ ಅಮಾನಿ ಪುಷ್ಪಗಿರಿ ಅವರು ಮುಖ್ಯಪ್ರಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಉಲಮಾಗಳು, ಸಾದಾತುಗಳು ಮತ್ತು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಎಸ್‌ವೈಎಸ್ ಪುತ್ತೂರು ಝೋನ್ ಅಧ್ಯಕ್ಷ ಅಬ್ದುಲ್ ಜಲೀಲ್ ಸಖಾಫಿ ಕರ್ನೂರು, ಸ್ವಾಗತ ಸಮಿತಿ ನಿರ್ದೇಶಕ ಅಬೂಶಝ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ, ಸ್ವಾಗತ ಸಮಿತ ಕನ್ವಿನರ್ ಅಬ್ದುಲ್‌ರಹಮಾನ್ ಹಿಮಮಿ ರೆಂಜ, ಕೋಶಾಧಿಕಾರಿ ಅಬ್ದುಲ್ ಕರೀಮ್ ಹಾಜಿ ಕಾವೇರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here