ನೀರಾಜೆ ನೂರುಲ್ ಹುದಾ ಮದ್ರಸ ಮತ್ತು ಮಸ್ಜಿದ್ ನಲ್ಲಿ ಕಲಾ ಸಾಹಿತ್ಯ ಸ್ಪರ್ಧೆ

0

ರಾಮಕುಂಜ: ನೂರುಲ್ ಹುದಾ ಮದ್ರಸ ಮತ್ತು ಮಸ್ಜಿದ್ ನೀರಾಜೆ ಇಲ್ಲಿ 15೦೦ನೇ ನಬಿ ದಿನಾಚರಣೆ ಪ್ರಯುಕ್ತ ನೂರುನ್ ಅಲಾ ನೂರ್ ವಿದ್ಯಾರ್ಥಿ ಫೆಸ್ಟ್-2K25 ಹಾಗೂ ಮದ್ರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ಸೆ.9ರಂದು ಸಂಜೆ ಅಸರ್ ನಮಾಝಿನ ಬಳಿಕ ನಡೆಯಿತು.


ಮೌಲೂದ್ ಹಾಗೂ ದುಆ ನೇತೃತ್ವವನ್ನು ಮುನವ್ವರಲಿ ಇಸ್ಮಾಯಿಲ್ ಅಲ್ ಬುಖಾರಿ ವಹಿಸಿದ್ದರು. ಆತೂರು ಬಿಜೆಎಂ ಖತೀಬ್ ಹಾಗೂ ನೀರಾಜೆ ಎನ್‌ಎಚ್‌ಎಂ ಗೌರವಾಧ್ಯಕ್ಷರೂ ಆದ ಜುನೈದ್ ಜಿಫ್ರೀ ತಂಗಳ್ ದು:ವಾಶೀರ್ವಚನ ನೀಡಿದರು. ನೀರಾಜೆ ಎನ್‌ಎಚ್‌ಎಂ ಅಧ್ಯಕ್ಷ ಎನ್.ಸಿದ್ದೀಕ್ ಅಧ್ಯಕ್ಷತೆ ವಹಿಸಿದ್ದರು. ಮದ್ರಸದ ಮುಖ್ಯ ಅಧ್ಯಾಪಕರಾದ ಶೌಕತ್ ಅಲಿ ಅಸ್ಲಮಿ ಉದ್ಘಾಟಿಸಿದರು. ಸುಲ್ತಾನ್ ದಾರಿಮಿ ಶುಭಹಾರೈಸಿದರು.


ಮುಖ್ಯ ಅತಿಥಿಗಳಾಗಿ ಆತೂರು ಬಿಜೆಎಂ ಅಧ್ಯಕ್ಷ ಅಹ್ಮದ್ ಕುಂಞಿ, ಫಾರೂಕ್ ತಂಗಳ್, ಲತೀಫ್ ಫೈಝಿ, ಸತ್ತಾರ್ ಅಸ್ನವಿ, ಹಾರಿಸ್ ಅಝ್ಹರಿ, ಬಿ.ಕೆ. ಅಬ್ದುಲ್ ಅಝೀಝ್ ಕಿಡ್ಸ್, ಪೊಡಿಕುಂಞಿ, ಹಸೈನಾರ್ ಹಾಜಿ ಕೊಯಿಲ, ಯಹ್ಯಾ ಫೈಝಿ, ಮುಹಮ್ಮದ್ ರಫೀಕ್ ಜಿ., ನಝಿರ್ ಎನ್.ಕೆ., ಯೂಸುಫ್, ಸಿರಾಜ್ ಬಡ್ಡಮೆ, ನೌಫಲ್ ಕೊಯಿಲ, ನಝೀರ್ ಕೊಯಿಲ, ಸಿದೀಕ್ ಸಿ.ಕೆ.ಕುಂಡಾಜೆ, ಮುಹಮ್ಮದ್ ಹಾಜಿ ಮುಂಬೈ, ಯಾಕೂಬ್, ಸಿರಾಜ್ ಎನ್., ಹನೀಫ್ ಜನಪ್ರಿಯ, ಶಾಜಿ ಕುಂಡಾಜೆ, ಅನ್ಸಾರ್, ಪುತ್ತು ಕುಂಞಿ, ರಝಕ್ ಜನಪ್ರಿಯ ಕೊಯಿಲ, ಎನ್‌ಎಚ್‌ಎಂ ಪದಾಧಿಕಾರಿಗಳು, ಯಂಗ್ ಮೆನ್ಸ್ ಪದಾಧಿಕಾರಿಗಳು, ಎಸ್‌ಕೆಎಸ್‌ಎಸೆಫ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇಂಬ್ರಾನ್ ದಾರಿಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

LEAVE A REPLY

Please enter your comment!
Please enter your name here