ಗಾನಸಿರಿಯಲ್ಲಿ ಯಕ್ಷಗಾನ ತರಗತಿಗಳು ಆರಂಭ

0

ಪುತ್ತೂರು: ಸುಗಮ ಸಂಗೀತ ಕ್ಷೇತ್ರದ ಬಲುದೊಡ್ಡ ಹೆಸರು ಡಾ. ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾ ಕೇಂದ್ರದಲ್ಲಿ ಕಟೀಲು ಮೇಳದ ಖ್ಯಾತ ಕಲಾವಿದ ಗಣೇಶ್ ಪಾಲೆಚ್ಚಾರು ಇವರ ನೇತೃತ್ವದಲ್ಲಿ ಯಕ್ಷಗಾನ ನಾಟ್ಯ ತರಗತಿಗಳು ಆರಂಭಗೊಂಡಿದೆ.


ಗುರುಗಳಾದ ಗಣೇಶ್ ಪಾಲೆಚ್ಚಾರು ರವರು ದೀಪ ಬೆಳಗಿಸಿ ತರಗತಿಗಳನ್ನು ಉದ್ಘಾಟಿಸಿದರು.ವೇದಿಕೆಯಲ್ಲಿ ಗಾನಸಿರಿಯ ಸಾರಥಿ ಡಾ. ಕಿರಣ್ ಕುಮಾರ್ ಗಾನಸಿರಿ, ಗಾನಸಿರಿಯ ಪೋಷಕರು ಡಾ|ಅನನ್ಯ ಲಕ್ಷ್ಮಿ ಸಂದೀಪ್, ಜಯರಾಮಗೌಡ ಮತ್ತು ಸಹಾಯಕ ತರಬೇತುದಾರೆ ಅನುಪಮಾ ಉಪಸ್ಥಿತರಿದ್ದರು.


ಉದ್ಘಾಟನೆಯ ಬಳಿಕ ವಿದ್ಯುಕ್ತವಾಗಿ ಯಕ್ಷಗಾನ ನಾಟ್ಯ ತರಗತಿಗಳನ್ನು ಆರಂಭಿಸಲಾಯಿತು. ಆದಷ್ಟು ಬೇಗ ಹಿಮ್ಮೇಳ ತರಗತಿಗಳೂ ಆರಂಭವಾಗಲಿದ್ದು ಪ್ರತಿ ಆದಿತ್ಯವಾರ ಅಪರಾಹ್ನ 1.15 ರಿಂದ ತರಗತಿಗಳು ನಡೆಯುತ್ತಿದೆ.ಹೊಸದಾಗಿ ಸೇರಲಿಚ್ಚಿಸುವವರು 9901555893 ಸಂಖ್ಯೆಗೆ ಕರೆ ಮಾಡಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here