ಪುತ್ತೂರು: ಬೊಳುವಾರು ವಿಶ್ವಕರ್ಮ ಯುವ ಸಮಾಜ, ಬೊಳುವಾರು ವಿಶ್ವಬ್ರಾಹ್ಮಣ ಸೇವಾ ಸಂಘದ ವತಿಯಿಂದ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಸೆ.16ರಂದು ಶ್ರೀ ವಿಶ್ವಕರ್ಮ ಪೂಜೆಯ ಅಂಗವಾಗಿ ಬೆಳಗ್ಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಶ್ರೀ ವಿಶ್ವಕರ್ಮ ದೇವರ ಮೆರವಣಿಗೆಯು ಚೆಂಡೆ, ಕುಣಿತ ಭಜನೆಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
