ಕುರಿಯ: ಅನಾರೋಗ್ಯದಿಂದ ಬಳಲುತ್ತಿದ್ದ ಪುರೋಹಿತ ನೇಣು ಬಿಗಿದು ಆತ್ಮಹತ್ಯೆ

0

ಪುತ್ತೂರು: ಪುರೋಹಿತರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.15ರಂದು ಕುರಿಯ ಗ್ರಾಮದ ಕೈಂತಿಲ ಎಂಬಲ್ಲಿ ನಡೆದಿದೆ.

ಕುರಿಯ ಕೈಂತಿಲ ನಿವಾಸ್ದಿ ಪುರೋಹಿತ ಸುರೇಶ್ ನಕ್ಷತ್ರಿತ್ತಾಯ(58ವ.)ಆತ್ಮಹತ್ಯೆ ಮಾಡಿಕೊಂಡವರು.


ಸುಮಾರು ಎರಡೂವರೆ ತಿಂಗಳಿನಿಂದ ಸುರೇಶ ನಕ್ಷತ್ರಿತ್ತಾಯರವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಹೊಟ್ಟೆ ನೋವಿಗೆ ಔಷಧ ಮಾಡುತ್ತಿದ್ದರೂ ಗುಣಮುಖವಾಗಿರಲಿಲ್ಲ. ಇದೇ ವಿಚಾರದಲ್ಲಿ ಚಿಂತೆಯಲ್ಲಿದ್ದ ಅವರು ಕೃತ್ಯ ಎಸಗಿಕೊಂಡಿದ್ದಾರೆ. ಸೆ.15ರಂದು ಮಧ್ಯಾಹ್ನ 12.15ಕ್ಕೆ ಪಂಪ್ ಸ್ವಿಚ್ ಹಾಕಿ ನೀರು ತುಂಬಿದ ಮೇಲೆ ಬರುತ್ತೇನೆ ಎಂದು ಹೇಳಿ ಕುರಿಯ ಗ್ರಾಮದ ಕೈಂತಿಲ ಎಂಬಲ್ಲಿರುವ ಹಳೆಯ ಮನೆಗೆ ಹೋಗಿದ್ದ ಅವರು ಮಧ್ಯಾಹ್ನ 1.30 ಗಂಟೆ ಆದರೂ ಬಾರದೇ ಇದ್ದಾಗ ಸಂಶಯಗೊಂಡ ಪತ್ನಿ ರಾಧಿಕಾ ಅವರು ಹೋಗಿ ನೋಡಿ ಬರುವಂತೆ ಪುತ್ರ ವಿಶಾಖ ಅವರಲ್ಲಿ ಹೇಳಿದರು. ಅವರು ಹಳೆ ಮನೆಗೆ ನೋಡಿದಾಗ, ಹಳೆ ಮನೆಯ ಕೋಣೆಯ ಗೋಡೆಗೆ ಅಳವಡಿಸಿರುವ ಮರದ ಅಡ್ಡಕ್ಕೆ ಲುಂಗಿಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ಅವರು ಜೀವವಿರಬಹುದು ಎಂದು ಕೆಳಗಿಳಿಸಿ ನೋಡಿದಾಗ ಮೃತಪಟ್ಟಿರುವುದು ದೃಢಪಟ್ಟಿತ್ತು. ಅನಾರೋಗ್ಯದ ಕಾರಣ ಕೆಲಸಕ್ಕೆ ಹೋಗದೇ ಜೀವನದಲ್ಲಿ ಜಿಗುಪ್ಸೆಯಿಂದ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪತ್ನಿ ರಾಧಿಕಾರವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೆಂಗಳೂರು ವಿದ್ಯಾಪೀಠದಲ್ಲಿ ಪೌರೋಹಿತ್ಯ ಶಿಕ್ಷಣ ಪಡೆದಿದ್ದ ಸುರೇಶ್ ನಕ್ಷತ್ರಿತ್ತಾಯರವರು ಶಿಷ್ಯ ವರ್ಗವನ್ನು ಹೊಂದಿದ್ದಾರೆ. ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸಹಿತ ಹಲವು ಕಡೆ ವೈದಿಕ ಕಾರ್ಯಗಳಲ್ಲಿ ಅವರು ತೊಡಗಿಕೊಂಡಿದ್ದರು. ಮೃತರು ಪತ್ನಿ ರಾಧಿಕಾ ಹಾಗೂ ಪುತ್ರರಾದ ಶೇಖರ್ ಮತ್ತು ವಿಶಾಖ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here