ಪೆರಾಬೆ: ಓಮ್ನಿ ಕಾರೊಂದು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಕಡಬ ತಾಲೂಕಿನ ಕುಂತೂರಿನಲ್ಲಿ ಸೆ.16ರಂದು ಬೆಳಿಗ್ಗೆ ನಡೆದಿದೆ.

ಕುಂತೂರು ಗ್ರಾಮದ ಕೆದ್ದೊಟ್ಟೆ ನಿವಾಸಿ ಕೆ.ಎಂ.ಶಿವಪ್ರಸಾದ್ ಎಂಬವರು ತನ್ನ ಒಮ್ನಿ ಕಾರು(ಕೆಎ 21, ಪಿ 3039)ನಲ್ಲಿ ಬೆಳಿಗ್ಗೆ ಮನೆಯಿಂದ ಮಕ್ಕಳನ್ನು ಕರೆದುಕೊಂಡು ಬಂದು ಕುಂತೂರು ಮಾರ್ ಇವಾನಿಯೋಸ್ ಶಾಲೆಗೆ ಬಿಟ್ಟು ಮತ್ತೆ ಮನೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಶಿವಪ್ರಸಾದ್ ಅವರು ಕುಂತೂರುಪದವು-ಕೆದ್ದೊಟ್ಟೆ ಮಾರ್ಗದ ಪಂಜಳ ಎಂಬಲ್ಲಿಗೆ ತಲುಪುತ್ತಿದ್ದಂತೆ ಒಮ್ನಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರು ಒಮ್ನಿ ಕಾರು ನಿಲ್ಲಿಸಿ ಚಾಲಕನ ಸೀಟ್ ತೆಗೆಯುತ್ತಿದ್ದಂತೆ ಬೆಂಕಿಯ ಕಿಡಿ ಅವರ ಕೈ ಹಾಗೂ ಮುಖಕ್ಕೆ ತಾಗಿ ಸುಟ್ಟ ಗಾಯವಾಗಿದೆ. ಬೆಂಕಿಯಿಂದಾಗಿ ಒಮ್ನಿ ಕಾರು ಸಂಪೂರ್ಣ ಸುಟ್ಟುಹೋಗಿದೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅನಾಹುತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.