ಈಶ್ವರಮಂಗಲ: ನೆಟ್ಟಣಿಗೆ ಮುಡ್ನೂರು ಗ್ರಾಮದ ನೆಲ್ಲಿತ್ತಡ್ಕದಿಂದ ನೂಜಿಬೈಲು ಸಂಪರ್ಕಿಸುವ ರಸ್ತೆಗೆ ಪಂಚಾಯತ್ ಅನುದಾನದಲ್ಲಿ ಅಂದಾಜು ರೂ.1.25 ಲಕ್ಷ ವೆಚ್ಚದಲ್ಲಿ ರಸ್ತೆ ಕಾಂಕ್ರಿಟೀಕರಣಗೊಳ್ಳುತ್ತಿದೆ.
ರಸ್ತೆಗೆ ಅನುದಾನ ತರುವಲ್ಲಿ ಪ್ರಮುಖ ಕಾರಣಕರ್ತರಾದ ಪಂಚಾಯತ್ ಉಪಾಧ್ಯಕ್ಷ ರಾಮ ಮೇನಾಲ, ಇಂಜಿನಿಯರ್ ಅಬ್ದುಲ್ ಅಜೀಜ್, ಫಲಾನುಭವಿ ಮಧುಕರ ರೈ ನೆಲ್ಲಿತ್ತಡ್ಕ ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಕಾಂಕ್ರಿಟೀಕರಣದ ವೀಕ್ಷಣೆ ಮಾಡಿದರು. ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ ಅನುದಾನ ತರುವಲ್ಲಿ ಸಹಕರಿಸಿದರು.