ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮೇಳದ ಮಹಾಸಭೆಯಲ್ಲಿ ಪುತ್ತೂರು ಟಿಎಪಿಸಿಎಂಎಸ್‌ಗೆ ಸಾಧನ ಪ್ರಶಸ್ತಿ ಪ್ರದಾನ

0

ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು

ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದಿಂದ ಕೊಡಮಾಡುವ ಸಾಧನ ಪ್ರಶಸ್ತಿಯನ್ನು ಪುತ್ತೂರು ಟಿಎಪಿಸಿಎಂಎಸ್ ಮತ್ತು ಬಂಟ್ವಾಳ ಟಿಎಪಿಸಿಎಂಎಸ್‌ಗೆ ಲಭಿಸಿದ್ದು, ಸೆ.17ರಂದು ಬೆಂಗಳೂರಿನಲ್ಲಿ ನಡೆದ ಮಹಾಮಂಡಲದ 2024-25ನೇ ಸಾಲಿನ ಮಹಾಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.


ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪುತ್ತೂರು ಟಿಎಪಿಸಿಎಂಎಸ್‌ನ ನಿರ್ದೇಶಕರಾಗಿರುವ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಪ್ರಶಸ್ತಿ ಸ್ವೀಕರಿಸಿದರು. ಇದೇ ಸಂದರ್ಭ ಬಂಟ್ವಾಳ ಟಿಎಪಿಸಿಎಂಎಸ್‌ನ ಅಧ್ಯಕ್ಷರು ಕೂಡಾ ಪ್ರಶಸ್ತಿ ಸ್ವೀಕರಿಸಿದರು.


ಪುತ್ತೂರು ಟಿಎಪಿಸಿಎಂಎಸ್‌ನ ಪ್ರತಿನಿಧಿಯಾಗಿ ಶಶಿಕುಮಾರ್ ಬಾಲ್ಯೊಟ್ಟು:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿದೇರ್ಶಕರು ಮತ್ತು ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಪುತ್ತೂರು ಟಿಎಪಿಸಿಎಂಸ್‌ನ ಹಿರಿಯ ನಿರ್ದೇಶಕರೂ ಆಗಿದ್ದಾರೆ. ಹಾಗಾಗಿ ಪುತ್ತೂರಿನಿಂದ ಅವರನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲಕ್ಕೆ ಕಳುಹಿಸಿಕೊಡಲಾಗಿತ್ತು ಎಂದು ಪುತ್ತೂರು ಟಿಎಪಿಸಿಎಂಎಸ್‌ನ ಅಧ್ಯಕ್ಷ ಕೃಷ್ಣಕುಮಾರ್ ರೈ ತಿಳಿಸಿದ್ದಾರೆ.

ಸಂಘದ ಸಾಧನೆ ಸಂದ ಗೌರವ
ಪುತ್ತೂರು ಟಿಎಪಿಸಿಎಂಎಸ್ ವರದಿ ವರ್ಷದಲ್ಲಿ ಸುಮಾರು 7 ಕೋಟಿಗೂ ಮಿಕ್ಕಿ ವ್ಯವಹಾರ ಮಾಡಿ ರೂ. 36.52 ಲಕ್ಷ ರೂಪಾಯಿ ಲಾಭ ಗಳಿಸಿದೆ. ಜೊತೆಗೆ ಸಂಘದ ಹಲವು ಸಾಧನೆಗಳನ್ನು ಗುರುತಿಸಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದಿಂದ ಸಾಧನ ಪ್ರಶಸ್ತಿ ಲಭಿಸಿರುವುದು ಸಂಘದ ಬೆಳವಣಿಗೆಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ.
ಕೃಷ್ಣ ಕುಮಾರ್ ರೈ ಕೆದಂಬಾಡಿಗತ್ತು
ಅಧ್ಯಕ್ಷರು ಟಿಎಪಿಸಿಎಂಎಸ್ ಪುತ್ತೂರು

LEAVE A REPLY

Please enter your comment!
Please enter your name here