ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ 2025- 26ರ ಸಾಲಿನ ಮಾನವಿಕ ಸಂಘದ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ವಾಣಿನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ದಿನೇಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ” Humanities and languages – Scope and Opportunities ” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ನೀಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಕೆ “ಮಾನವೀಯ ಮೌಲ್ಯಗಳ ಕೊರತೆ ಕಾಡಲು ಮಾನವಿಕ ವಿಷಯಗಳ ಬಗ್ಗೆ ಉಂಟಾದ ನಿರಾಸಕ್ತಿಯೇ ಕಾರಣ. ಆದ್ದರಿಂದ ವಿದ್ಯಾರ್ಥಿಗಳು ಮಾನವಂತರಾಗಲು ಮಾನವಿಕ ವಿಷಯ ಅಧ್ಯಯನ ಮಾಡಬೇಕು ಎಂದು ಹೇಳಿದರು. ಗ್ರಂಥಾಪಾಲಕ ರಾಮ. ಕೆ ಕಲಾ ವಿಭಾಗದ ಮಹತ್ವ ಮತ್ತು ವಿಪುಲವಾದ ಅವಕಾಶಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ದಾಮೋದರ ಕಣಜಾಲು, ಮಾನವೀಯ ಸಂಘದ ಕಾರ್ಯಚಟುವಟಿಕೆಗಳು ಯಶಸ್ವಿಯಾಗಿ ನಡೆಯಲಿ ಎಂದರು.

2025 – 26ರ ಸಾಲಿನ ಮಾನವಿಕ ಸಂಘದ ಅಧ್ಯಕ್ಷರಾಗಿ ಮಮತಾ. ಕೆ ತೃತೀಯ ಬಿ. ಎ, ಕಾರ್ಯದರ್ಶಿಯಾಗಿ ರಿತೇಶ್. ಎಂ. ಎನ್ ದ್ವಿತೀಯ ಬಿ. ಎ, ಜೊತೆ ಕಾರ್ಯದರ್ಶಿಯಾಗಿ ಅಭಿಲಾಶ್. ಎಸ್ ಪ್ರಥಮ ಬಿ. ಎ, ಕೋಶಾಧಿಕಾರಿಯಾಗಿ ಕೃತಿ. ಕೆ ತೃತೀಯ ಬಿ. ಎ ಆಯ್ಕೆಯಾದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ. ಉದಯಶಂಕರ ಹೆಚ್ ರವರು ಪ್ರಥಮ ದ್ವಿತೀಯ ಮತ್ತು ತೃತೀಯ ಪದವಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಗಣಿತಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ನೀಡಿದರು.
ತೃತೀಯ ಬಿ. ಎ ವಿದ್ಯಾರ್ಥಿಗಳಾದ ಸೌಮ್ಯ ವಿ ಸ್ವಾಗತಿಸಿ, ಬಿ. ಎ ಸೌಮ್ಯ ಎಸ್ ವಂದಿಸಿದರು. ದೀಪಿಕಾ ಪರಿಚಯಿಸಿದರು. ಕೃತಿ ಕೆ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದದವರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.