ಸುಳ್ಯಪದವು ಶಬರಿನಗರ: ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಸಂಕ್ರಮಣ ಆಚರಣೆ, ಭಜನೆ, ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ

0

ಬಡಗನ್ನೂರು: ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸೋಣ ಸಂಕ್ರಮಣ ಆಚರಣೆ ಸೆ.16 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

 ಸೆ.16ರಂದು ಸಂಜೆ ಗಂ.6 ರಿಂದ  ಶಬರಿನಗರ ಸ್ವಾಮಿ ಕೊರಗಜ್ಜ ಬಾಲ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಗಂ.8ಕ್ಕೆ ಕ್ಷೇತ್ರದಲ್ಲಿ ಸಂಕ್ರಮಣ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.



ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮದ ಆಂಗವಾಗಿ ರಾತ್ರಿ ಗಂ.7 ರಿಂದ ಬೆಳ್ಳೂರು ಬಂಟ ಮಹಿಳಾ ಸಂಘದ ಸದಸ್ಯರಿಂದ “ಸಂಗರ ನಾಂಧಿ” ಎಂಬ ಪೌರಾಣಿಕ ಯಕ್ಷಗಾನ ತಾಳ ಮದ್ದಳೆ ನಡೆಯಿತು.

ಗೌರವಾರ್ಪಣೆ

ಸಂಗೀತ ಶಿಕ್ಷಕ ದಾಮೋದರ ಎಂ ಮರದಮೂಲೆ ಹಿಮ್ಮೇಳದ ಭಾಗವತರಾದ ನಿಶ್ಮಿತಾ ರೈ. ಎಸ್. ಬಜ,ಚೆಂಡೆ ಮತ್ತು,ಮದ್ದಳೆ ವಾದಕರಾದ ದೇವಿ ಪ್ರಸಾದ್ ಮತ್ತು ಆಯುಶ್ ರೈ  ಹಾಗೂ ಕಲಾವಿದರನ್ನು ಸಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು.

 ಈ ಸಂಧರ್ಭದಲ್ಲಿ ಸೇವಾ ಸಮಿತಿ  ಶಬರಿನಗರ ಉಪಾಧ್ಯಕ್ಷ ಸದಾನಂದ ರೖೆ ಬೋಳಂಕೂಡ್ಲು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಜತೆ ಕಾರ್ಯದರ್ಶಿ ವಿನಯ್ ದೇವಸ್ಯ, ಕೋಶಾಧಿಕಾರಿ ಭಾಸ್ಕರ್ ಹೆಗ್ಡೆ ಪೂಜಾ ಕರ್ಮಿ ಮಾಧವ ಸಾಲಿಯಾನ್ ಮರದಮೂಲೆ ಹಾಗೂ ಸೇವಾ ಸಮಿತಿಯ ಸದಸ್ಯರು, ಊರ ಪರವೂರ ಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 400 ಮಂದಿ ಭಕ್ತಾದಿಗಳು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here