ನಿಡ್ಪಳ್ಳಿ: ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಸಲುವಾಗಿ ಸೆ. 17ರಂದು ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಹೆಬ್ಬಾರ್ ಪ್ರಾರ್ಥನೆ ಸಲ್ಲಿಸಿ ಪ್ರಧಾನಿಯವರಿಗೆ ಶುಭ ಹಾರೈಸಿದರು.

ಪುತ್ತೂರು ಬಿ.ಜೆ.ಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಕುಮಾರ ನರಸಿಂಹ ಭಟ್ ಬುಳೆನಡ್ಕ, ನಿಡ್ಪಳ್ಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಕುಮಾರ್ ಬಿ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್. ಬಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ, ಬಿ.ಜೆ.ಪಿ ಬೂತ್ ಅಧ್ಯಕ್ಷ ರೋಹಿತ್. ಪಿ, ಕಾರ್ಯದರ್ಶಿ ಪದ್ಮನಾಭ ಕುಲಾಲ್, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಮಂಜುನಾಥ ರೈ, ದೇವಸ್ಥಾನದ ಅರ್ಚಕರ ಸಹಾಯಕ ವಿಶ್ವೇಶ್ವರ ಭಟ್, ಶ್ರೀನಿವಾಸ ಗೌಡ ಮತ್ತಿತರರು ಉಪಸ್ಥಿತರಿದ್ದರು.