ಪುತ್ತೂರು: ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು (NRCC ಮೊಟ್ಟೆತ್ತಡ್ಕ) ಇದರ ವತಿಯಿಂದ ಸೆ.11ರಂದು ಹಿಂದೀ ದಿನ ಆಚರಣೆ ಪ್ರಯುಕ್ತ “ಏಕ್ದೇಶ್ಏಕ್ ಭಾಷಾ” ಎಂಬ ವಿಷಯದ ಬಗ್ಗೆ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ನಡೆಸಿದ ತಾಲೂಕು ಮಟ್ಟದ ಹಿಂದಿ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 9ನೇ ಇ ತರಗತಿಯ ಆದಿತ್ಯ ಭಂಡಾರ್ಕರ್ (ನೆಲ್ಲಿಕಟ್ಟೆ ಕೆ ಅವಿನಾಶ್ ಭಂಡಾರ್ಕರ್ ಮತ್ತುಅಕ್ಷತಾ ಭಂಡಾರ್ಕರ್ ದಂಪತಿಗಳ ಪುತ್ರ) ಪ್ರಥಮ ಬಹುಮಾನ ಗಳಿಸಿರುತ್ತಾರೆ. ಇವರಿಗೆ ಹಿಂದಿ ಶಿಕ್ಷಕಿ ಗೀತಾರೈ ಕೆ ಯವರು ಮಾರ್ಗದರ್ಶನ ನೀಡಿರುತ್ತಾರೆ ಎಂದುಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
