ಪುತ್ತೂರು:ಸೆ.5ರಂದು ನಿಧನರಾಗಿರುವ ಇಲ್ಲಿನ ದರ್ಬೆ ನಿವಾಸಿ ಶ್ರೀಮತಿ ಸುಚಿತ್ರ ಹೆಚ್.ಆಚಾರ್ಯ ಅವರ ಶ್ರದ್ಧಾಂಜಲಿ ಸಭೆಯು ಸೆ.17ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನೆರವೇರಿತು.
ಪುರೋಹಿತ್ ಪ್ರವೀಣ್ ಆಚಾರ್ಯರವರು ಮೃತರ ಬಗ್ಗೆ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು.ಮೃತರ ಪತಿ ಕೋರ್ಟ್ ರಸ್ತೆ ಹರ್ಷೋದಯ ಜ್ಯುವೆಲ್ಸ್ ಮಾಲಕ ಕೆ.ಹರೀಶ್ಚಂದ್ರ ಆಚಾರ್ಯ,ಮಕ್ಕಳಾದ ಶಶಾಂಕ್ ಹೆಚ್.ಆಚಾರ್ಯ, ಶಮಂತ್ ಹೆಚ್.ಆಚಾರ್ಯ ಹಾಗೂ ಕುಟುಂಬಸ್ಥರು, ಬಂಧು ಮಿತ್ರರು,ಪುತ್ತೂರು ನಗರಸಭೆಯ ಅಧ್ಯಕ್ಷೆ ಲೀಲಾವತಿ ಸೇರಿದಂತೆ ವಿವಿಧ ಗಣ್ಯರು, ವಿಶ್ವಕರ್ಮ ಮಹಿಳಾ ಮಂಡಳಿಯ ಸದಸ್ಯರು,ವಿಶ್ವಕರ್ಮ ಸಂಘ ಸಂಸ್ಥೆಗಳ ಪದಾಽಕಾರಿಗಳ ಸಹಿತ ನೂರಾರು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಮೃತರ ಆತ್ಮಕ್ಕೆ ಸದ್ಗತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.