ನಾಗರಿಕರಿಗೆ ಹೇಳ ಹೊರಟಿದೆ ʼಸರಸ್ವತಿ ನಾಗರಿಕತೆʼ ಯ ಒಡಲು

0

ಸರಸ್ವತಿ ಎಂಬ ಭಾವನೆ ಭಾರತೀಯರಲ್ಲಿ ದೇವತ್ವದ ಕಲ್ಪನೆ ಒಂದೆಡೆಯಾದರೆ, ಸರಸ್ವತಿ ಎನ್ನುವ ನದಿ ಅಮೃತದ ಕಲ್ಪನೆಯನ್ನು ಮಾಡುವ ಅನೇಕ ವ್ಯಕ್ತಿಗಳನ್ನು ಅಲ್ಲೋ ಇಲ್ಲೋ ಕಾಣಬಹುದು. ಕಣ್ಣಿಗೆ ಕಾಣದ ಸರಸ್ವತಿಯನ್ನು ನಮ್ಮ ದೇಶದ ಅನೇಕರು ಯಾಕಿಷ್ಟು ಆಡಿಕೊಳ್ಳುತ್ತಾರೆ ಆ ಹೆಸರಿನ ನದಿ ನಮ್ಮಲ್ಲಿ ಇತ್ತು ಅನ್ನುವವರು ಒಂದೆಡೆಯಾದರೆ ಅದು ಕಲ್ಪನೆ ಎಂದು ವಾದಿಸುವವರು ಇನ್ನೊಂದೆಡೆ, ಆವಿಷ್ಕಾರವನ್ನು ಕೈಗೊಂಡ ಸರಕಾರ, ವಿಜ್ಞಾನಿಗಳು ಹೀಗೆ ಅನೇಕ ದಂಡೆ ಇದರ ಈ ಹೆಸರಿನ ಹಿಂದೆ ಬಿದ್ದಿರುವ ಬಲು ದೊಡ್ಡ ರೋಚಕ ಸಂಗತಿ ಅನೇಕ.

ಋಗ್ವೇದದಲ್ಲಿ ಮತ್ತು ನಂತರ ವೈದಿಕ ಮತ್ತು ನಂತರದ ವೇದಗಳಲ್ಲಿ ಸರಸ್ವತಿ ನದಿಯ ಉಲ್ಲೇಕವಿದೆ. ಇದು ವೈದಿಕ ಧರ್ಮದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಮೂಲಗಳ ಪ್ರಕಾರ, ನದಿಯು ಇತರ ಐತಿಹಾಸಿಕ ನದಿಯಾದ ಸಿಂಧೂ ನದಿಯಿಂದ ಭಿನ್ನವಾಗಿದೆ ಮತ್ತು ಹಿಮಾಲಯದಿಂದ ಅರಬ್ಬಿ ಸಮುದ್ರಕ್ಕೆ ಹರಿಯುತ್ತದೆ ಎಂದು ಹೇಳಲಾಗುತ್ತದೆ. ಗುಪ್ತಗಾಮಿನಿಯಾಗಿ ಈಗಲೂ ಹರಿಯುತ್ತಿದ್ದಾಳೆ ಆಕೆ ಮರುಭೂಮಿಯ ರಾಜ್ಯ ರಾಜಸ್ಥಾನದಲ್ಲಿ ಗುಪ್ತಗಾಮನಿಯಾಗಿದ್ದಾಳೆ ಎನ್ನುವ ಅನೇಕ ಸಂಶೋಧನೆಗಳು ಹೇಳುವುದು ಒಂದೆಡೆ.ಈ ಅನೇಕ ಸಂಶೋಧನೆಗಳಲ್ಲಿ ಇದೆ ಎಂದು ವಾದಿಸಲು ಅನೇಕ ಪುಸ್ತಕಗಳು ನಮ್ಮ ಕಣ್ಣೆದುರಿಗೆ ಕಾಣಸಿಗುತ್ತದೆ ಅದರಲ್ಲಿ ಒಂದು ʼಸರಸ್ವತಿ ನಾಗರಿಕತೆ: ಪ್ರಾಚೀನ ಭಾರತೀಯ ಇತಿಹಾಸದ ಹೊಸಮಗ್ಗುಲುʼ ಎನ್ನುವ ಡಾ ಸಿ ಜಿ ರಾಘವೇಂದ್ರ ವೈಲಾಯ ಎಂಬವರು ಇಂಗ್ಲಿಷಿನ ಮೇಜರ್ ಜನರಲ್ ಜೆ ಡಿ ಬಕ್ಷಿ ಅವರು ಬರೆದ ಆಂಗ್ಲ ಮೂಲದಿಂದ ಕನ್ನಡಕ್ಕೆ ಅನುವಾದಿಸಿ ಬರೆದ ಪುಸ್ತಕ. ಕನ್ನಡಿಗರು ಇದರ ಉಪಯೋಗವನ್ನು ಇದರ ಕುರಿತು ಚಿಂತನೆ, ಅರಿವು ಮೂಡಲಿ ಎಂದು ನೀಡಿದ್ದಾರೆ.

ಏನೇ ಹೇಳಿ ನಮ್ಮಲ್ಲೂ ಅಲ್ಲೋ ಇಲ್ಲೋ ಇದರ ವಾದ, ವಾಗ್ವಾದ ಲೇಖನಗಳನ್ನು ಕೇಳಿ, ನೋಡಿರುತ್ತೇವೆ. ಆದರೆ ಅದರ ಕುರಿತು ಹೆಚ್ಚು ಗೋಜಿಗೆ ಬಿದ್ದು,ತಿಳಿದುಕೊಂಡಿರುವದಿಲ್ಲ ಆದರೆ ಅದರ ಕುರಿತು ಒಂದು ತಂಡ, ವಿಜ್ಞಾನಿಗಳು ಏನು ಹೇಳಲಿದ್ದಾರೆ ಎಂದು ತಿಳಿಬೇಕಾ ಹಾಗಾದರೆ ಅಂಗೈಯಲ್ಲೆ ಪುಸ್ತಕದ ರೂಪದಲ್ಲಿ ತಿಳಿಯಲು ʼಸರಸ್ವತಿ ನಾಗರಿಕತೆʼಯ ಪುಸ್ತಕ ಹೇಳಲಿದೆ ಒಂದು ಇತಿಹಾಸ. ಪುಸ್ತಕದ ಆಯ್ಕೆ ನಿಮ್ಮದು ಮಾಹಿತಿ ನಮ್ಮದು.. ಧನ್ಯವಾದಗಳು…

ಇಂಗ್ಲಿಷ್‌ ಪುಸ್ತಕಕ್ಕಾಗಿ https://shorturl.at/SwAZ1 ಮೂಲಕ ಪಡೆದುಕೊಳ್ಳಬಹುದು
ಕನ್ನಡಕ್ಕಾಗಿ ಖರೀದಿಸಲು ಪುಸ್ತಕ ಮನೆ( ಕರೆ ಮಾಡಿ ತಿಳಿಸಿದರೆ ನೀವಿರುವ ಜಾಗಕ್ಕೆ ತಲುಪಿಸುವ ಪುಸ್ತಕ ಮಳಿಗೆ) +91 96064 74289

ಬರಹ : ಅಕ್ಷಯ್‌ ಕುಮಾರ್‌ ಎ

LEAVE A REPLY

Please enter your comment!
Please enter your name here