ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ

0

ನಿಡ್ಪಳ್ಳಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಕೇಂದ್ರದ 15 ನೇ ಹಣಕಾಸು ಯೋಜನೆ ಮತ್ತು ರಾಜ್ಯ ಹಣಕಾಸು ಯೋಜನೆ 2025-26 ನೇ ಸಾಲಿನ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಸೆ.17ರಂದು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭಾಧ್ಯಕ್ಷತೆ ವಹಿಸಿದ್ದ ಪುತ್ತೂರು ಪಂ.ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಭರತ್ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯ  ಉದ್ದೇಶದ ಬಗ್ಗೆ ವಿವರಿಸಿದರು.

ಹಿಂದಿನ ಸಭಾ ನಡಾವಳಿಯ ಅನುಪಾಲನಾ ವರದಿಯನ್ನು ಪಿಡಿಒ ಸಂಧ್ಯಾಲಕ್ಷ್ಮೀ ವಾಚಿಸಿದರು.ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಜಯಲಕ್ಷ್ಮೀ ಸಾಮಾಜಿಕ ಪರಿಶೋಧನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ತಾಂತ್ರಿಕ ಸಂಯೋಜಕ ವಿನೋದ್, ತಾಂತ್ರಿಕ ಸಹಾಯಕಿ ಆಕಾಂಕ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಶಿವರಾಮ ಮೂಲ್ಯ ಸ್ವಾಗತಿಸಿ ವಂದಿಸಿದರು. ನರೇಗಾ ಯೋಜನೆಯ ರಮೇಶ ಪೂಜಾರಿ, ಚಂಚಲ ಕುಮಾರಿ, ಕೌಶಲ್ಯ ಡಿ.ಬಿ, 15 ನೇ ಹಣಕಾಸು ಯೋಜನೆಯ ಅಧಿಕಾರಿಗಳಾದ ಕಾರ್ತಿಕ್ ಎ, ಶ್ರೀವಿದ್ಯಾ ಕೆ.ಎಂ, ಹೇಮಲತಾ, ಪಂಚಾಯತ್ ಸದಸ್ಯರಾದ ನಂದಿನಿ ಆರ್.ರೈ, ಸತೀಶ್ ಶೆಟ್ಟಿ, ಗ್ರೆಟಾ ಜೆನೆಟಾ ಡಿ’ ಸೋಜಾ ಮತ್ತು ಗ್ರಾಮಸ್ಥರು ಪಾಲ್ಗೊಂಡರು. ಸಿಬ್ಬಂದಿಗಳಾದ ರೇವತಿ, ವಿನೀತ್ ಕುಮಾರ್, ಸಂಶೀನಾ, ಜಯ ಕುಮಾರಿ ಸಹಕರಿಸಿದರು.

2024-25 ನೇ ಸಾಲಿನಲ್ಲಿ ಗ್ರಾಮ ಪಂಚಾಯತಿನ 15 ನೇ ಹಣಕಾಸು ಯೋಜನೆಯ ಒಟ್ಟು ಖರ್ಚು-ರೂ. 8,00,709-00.ಮಹಾತ್ಮ ಗಾಂಧಿ ನರೇಗಾ ಯೋಜನೆಯ 2024-25 ನೇ ಸಾಲಿನ ಕಾಮಗಾರಿಗಳ ಒಟ್ಟು ವೆಚ್ಚ ಹೀಗಿದೆ. ನರೇಗಾ ಯೋಜನೆಯಲ್ಲಿ ಒಟ್ಟು 83 ಕಾಮಗಾರಿಗಳು ಅನುಷ್ಠಾನ ಗೊಂಡಿವೆ.ಕೂಲಿ ಮೊತ್ತ ರೂ.13,68,429-00.ಸಾಮಾಗ್ರಿ ವೆಚ್ಚ ರೂ.3,78,481-00 ಆಗಿದ್ದು ಒಟ್ಟು ಮೊತ್ತ ರೂ.17, 46,910-00 ಆಗಿದ್ದು ಒಟ್ಟು ಮಾನವ ದಿನ 3922 ಆಗಿದೆ.

LEAVE A REPLY

Please enter your comment!
Please enter your name here