ಪುತ್ತೂರು: ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ) ಮಾನವಿಕ ವಿಭಾಗ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ಇದರ ಸಹಯೋಗದೊಂದಿಗೆ, `ಅಬ್ಬಕ್ಕ 500′ – ಪ್ರೇರಣದಾಯಿ 100 ಉಪನ್ಯಾಸ ಸರಣಿಯಲ್ಲಿ 73ನೇ ಎಸಳನ್ನು ಆಯೋಜಿಸಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು, ಹೆಣ್ಣುಮಕ್ಕಳನ್ನು ಎಲ್ಲಾ ರೀತಿಯಲ್ಲೂ ಹತ್ತಿಕ್ಕುವ ಕಾಲದಲ್ಲಿ ಅಬ್ಬಕ್ಕನು, ಅಪರಿಮಿತ ಸಾಧನೆಯನ್ನು ಮಾಡಿದಾಕೆ. ಆದುದರಿಂದ, ೨೧ನೇ ಶತಮಾನದಲ್ಲಿರುವ ಎಲ್ಲಾ ಹೆಣ್ಣುಮಕ್ಕಳು, ಅಬ್ಬಕ್ಕನಂತಹ ಶೌರ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಉಪನ್ಯಾಸ ನೀಡಿದ ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಅಣ್ಣಪ್ಪ ಶಾಸ್ತಾನರವರು ಅಬ್ಬಕ್ಕನ ಹುಟ್ಟಿನಿಂದ ಸಾವಿನವರೆಗಿನ ವಿವರವನ್ನು ನೀಡಿದರು. ಉಳ್ಳಾಲದ ರಾಣಿಯಾದ ಅಬ್ಬಕ್ಕ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಪ್ರಥಮ ಮಹಿಳೆ, ಆಕೆಯ ಧೈರ್ಯದಿಂದ ಎಲ್ಲರಿಗೂ ಮಾದರಿಯಾದವರು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ ಆಂಟನಿ ಪ್ರಕಾಶ್ ಮೊಂತೆರೋ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ತಮ್ಮ ನೆಲ, ಸಂಸ್ಕೃತಿ ಹಾಗೂ ಭಾಷೆಯ ಬಗ್ಗೆ ಅಭಿಮಾನ ಹೊಂದಿರಬೇಕೆಂದರು. ಹೆಣ್ಣುಮಕ್ಕಳು ಅಬ್ಬಕ್ಕನಂತೆ ಆತ್ಮಸ್ಥೌರ್ಯವನ್ನು ಬೆಳೆಸಿಕೊಳ್ಳಬೇಕೆಂದರು. ವೇದಿಕೆಯಲ್ಲಿ, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಮಾನವಿಕ ವಿಭಾಗದ ಮುಖ್ಯಸ್ಥ ಡಾ ನಾರ್ಬರ್ಟ್ ಮಸ್ಕರೇನಸ್ ಹಾಗೂ ಮಂಗಳೂರಿನ KRMSS ಸಂಯೋಜಕ ಡಾ. ಪ್ರಮೋದ್ ಉಪಸ್ಥಿತರಿದ್ದರು.
ಮಾನವಿಕ ವಿಭಾಗ ಹಾಗೂ ಕಾಲೇಜಿನ ಉಪನ್ಯಾಸಕರು ಉಪನ್ಯಾಸಕರು ಉಪಸ್ಥಿತರಿದ್ದರು. ವಿಷ್ಣುಪ್ರಿಯ, ಪ್ರಥಮ ಬಿಎ ಪ್ರಾರ್ಥಿಸಿದರು. ಪವನ್ ದ್ವಿತೀಯ ಬಿಎ, ಸ್ವಾಗತಿಸಿ, ಸೃಷ್ಟಿ ಶೆಣೈ, ಪ್ರಥಮ ಬಿಎ ವಂದಿಸಿದರು. ಸಂಜನಾ ಜೆ ರಾವ್, ತೃತೀಯ ಬಿಎ ಕಾರ್ಯಕ್ರಮ ನಿರೂಪಿಸಿದರು.