ನಿಡ್ಪಳ್ಳಿ: ಪಾಣಾಜೆ ಗ್ರಾಮದ ಭರಣ್ಯ ನಿವಾಸಿ ಕೂಲಿ ಕಾರ್ಮಿಕ ಸುರೇಶ (ಚೋಯಿ ಭರಣ್ಯ) ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪಾಣಾಜೆ ಇವರ ವತಿಯಿಂದ ರೂ. 10,000 ಸಹಾಯ ಧನದ ಚೆಕ್ಕನ್ನು ನ.3 ರಂದು ಹಸ್ತಾಂತರಿಸಲಾಯಿತು.
ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಇವರು ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದಾರೆ.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಮಾರ್ಗದರ್ಶಕರಾದ ರಾಕೇಶ್ ರೈ ಕಡಮಾಜೆ, ಪುಷ್ಪರಾಜ ರೈ ಕೋಟೆ, ಪುತ್ತಿಲ ಪರಿವಾರದ ಸೇವಾ ಟ್ರಸ್ಟ್ (ರಿ) ಪುತ್ತೂರು ಇದರ ಪ್ರಧಾನ ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು, ಪಾಣಾಜೆ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಸುಕಿನ್ ರಾಜ್ ಕೊಂದಲ್ಕಾನ, ಕಾರ್ಯಕರ್ತರಾದ ವಸಂತ ಭರಣ್ಯ, ಪ್ರದೀಪ್ ಪಾಣಾಜೆ,ಸಂದೀಪ್ ಕೆ,ವಿನಯ ಭರಣ್ಯ, ಜಯಪ್ರಸಾದ್ ರೈ ಕೋಟೆ,ಗುರುರಾಜ್ ಭರಣ್ಯ, ನಾರಾಯಣ ಭರಣ್ಯ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
