ಆತೂರು: ವಿ. ಫ್ಯಾಷನ್ ’ಡೈಲಿ ವೇರ್’ ಶುಭಾರಂಭ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ವಿವಾ ಕಾಂಪ್ಲೆಕ್ಸ್‌ನಲ್ಲಿ ವಿ.ಫ್ಯಾಷನ್ ’ಡೈಲಿ ವೇರ್’ ಮಳಿಗೆ ಸೆ.18ರಂದು ಬೆಳಿಗ್ಗೆ ಶುಭಾರಂಭಗೊಂಡಿತು.


ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಶ್ ಶೆಟ್ಟಿ ಹಾಗೂ ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು ರಿಬ್ಬನ್ ಕಟ್ ಮಾಡಿ ಹೊಸ ಮಳಿಗೆ ಉದ್ಘಾಟಿಸಿದರು. ಕುಂಡಾಜೆ ಜುಮಾ ಮಸೀದಿ ಖತೀಬ್ ಮಹಮ್ಮದ್ ಹನೀಫ್ ಅಸ್ಲಾಮಿ ದು:ವಾಶೀರ್ವಚನ ನೀಡಿದರು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಶ್ ಶೆಟ್ಟಿ ಅವರು ಆತೂರು ಪರಿಸರದಲ್ಲಿ ಇಂತಹ ಜವುಳಿ ಮಳಿಗೆಯ ಅವಶ್ಯಕತೆ ಇತ್ತು. ಈಗ ವಿ.ಫ್ಯಾಷನ್ ಆರಂಭಗೊಂಡಿರುವುದರಿಂದ ಜನ ಪೇಟೆ, ಪಟ್ಟಣಗಳಿಗೆ ಬಟ್ಟೆ ಖರೀದಿಗೆ ಹೋಗಬೇಕಾಗಿಲ್ಲ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಈ ಮಳಿಗೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು ಮಾತನಾಡಿ, ಗ್ರಾಮೀಣ ಪ್ರದೇಶವಾಗಿರುವ ಆತೂರಿನಲ್ಲಿ ಸುಸಜ್ಜಿತವಾದ ಜವುಳಿ ಮಳಿಗೆ ಆರಂಭಗೊಂಡಿರುವುದು ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಈ ಮಳಿಗೆ ಮೂಲಕ ಜನರಿಗೆ ಗುಣಮಟ್ಟದ ಸೇವೆ ಸಿಗಲಿ ಎಂದು ಹಾರೈಸಿದರು.


ಅತಿಥಿಯಾಗಿದ್ದ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಮಾತನಾಡಿ, ವಿ.ಫ್ಯಾಷನ್‌ನ ಮಾಲಕ ಇಮ್ತಿಯಾಜ್ ಅವರು ಅವರದ್ದೇ ಊರಿನಲ್ಲಿ ಅವರದ್ದೇ ಆದ ಕಟ್ಟಡದಲ್ಲಿ ಊರಿನ ಜನರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ವಸ್ತ್ರಗಳನ್ನು ನೀಡಬೇಕೆಂಬ ಅಭಿಲಾಷೆಯೊಂದಿಗೆ ಜವುಳಿ ಮಳಿಗೆ ಆರಂಭಿಸಿದ್ದಾರೆ. ಇಮ್ತಿಯಾಜ್‌ಯವರಿಗೆ ಹಣ ಮುಖ್ಯವಲ್ಲ. ಊರಿನ ಜನರಿಗೆ ಉತ್ತಮ ಸೇವೆ ನೀಡಬೇಕೆಂಬ ಧ್ಯೇಯ ಹೊಂದಿದ್ದಾರೆ. ಆದ್ದರಿಂದ ಅವರಿಗೆ ಊರಿನ ಜನರು ಸಹಕಾರ ನೀಡಬೇಕು. ಈ ಮೂಲಕ ಜವುಳಿ ಮಳಿಗೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು. ಕುಂಡಾಜೆ ಇಝಾತುಲ್ ಇಸ್ಲಾಂ ಮದರಸ ಅಧ್ಯಾಪಕ ಹಾರೀಫ್ ಪೈಝಿ, ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಪೃಥ್ವಿ ಟ್ರೇಡರ‍್ಸ್ ಮಾಲಕ ದಿವಾಕರ, ಪುರುಷೋತ್ತಮ ಗೋಕುಲನಗರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಾಲಕ ಇಮ್ತಿಯಾಜ್ ಅವರು ಸ್ವಾಗತಿಸಿದರು.

ಉಡುಪುಗಳಿಗೆ ವಿಶೇಷ ದರ;
ಶುಭಾರಂಭದ ಪ್ರಯುಕ್ತ ರೂ.100ಕ್ಕೆ ಸೀರೆ, ರೂ.149ಕ್ಕೆ ಕುರ್ತಾ, ರೂ.99ಕ್ಕೆ ಸಾರಿ ಸ್ಕರ್ಟ್, ರೂ.100ಕ್ಕೆ ನೈಟಿ, ರೂ.495ಕ್ಕೆ ಜೀನ್ಸ್ ಪ್ಯಾಂಟ್, ರೂ.250ಕ್ಕೆ ಶರ್ಟ್, ರೂ.99ಕ್ಕೆ ಟ್ರೇಕ್‌ಪ್ಯಾಂಟ್, ರೂ.100ಕ್ಕೆ ಟಿ-ಶರ್ಟ್, ರೂ.100ಕ್ಕೆ ಲುಂಗಿ, ರೂ.599ಕ್ಕೆ ಕಿಡ್ಸ್ ಡ್ರೆಸ್, ರೂ.299ಕ್ಕೆ ಬಾಯ್ಸ್ ಸೆಟ್, ರೂ.೫೦ಕ್ಕೆ ಬಾತ್ ಟವಲ್, ಟಾಯ್, ಬ್ಯಾಗ್, ಪ್ಯಾಂಪರ‍್ಸ್ ಲಭ್ಯವಿದೆ. ಗ್ರಾಹಕರಿಗೆ ಹೋಲ್‌ಸೇಲ್ ದರದಲ್ಲಿ ಶಾಪಿಂಗ್ ಮಾಡುವ ಅವಕಾಶವಿದೆ. ಗ್ರಾಹಕರು ಸಹಕಾರ ನೀಡುವಂತೆ ಮಾಲಕ ಇಮ್ತಿಯಾಜ್‌ರವರು ಕೋರಿದ್ದಾರೆ.

LEAVE A REPLY

Please enter your comment!
Please enter your name here