ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಇದರ ವತಿಯಿಂದ ನಡೆಸಲ್ಪಡುವ ಪ್ಯಾರಾಮೆಡಿಕಲ್ ಕಾಲೇಜು ಇದರ ಆಫ್ ಕ್ಯಾಂಪಸ್ ಉದ್ಘಾಟನೆ ಬೊಳ್ವಾರು ಅಲ್ ಮಾಸ್ ಟವರ್ನಲ್ಲಿ ಸೆ.17ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ವಹಿಸಿದ್ದರು. ಮರ್ಕಝುಲ್ ಹುದಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ವಳವೂರು ಮುಹಮ್ಮದ್ ಸಅದಿ ಉದ್ಘಾಟಿಸಿದರು.
ಕರ್ನಾಟಕ ಅಕಾಡೆಮಿ ಕಂಪ್ಯೂಟರ್ ಇದರ ಅಧ್ಯಕ್ಷ ಬಿ. ರವೀಂದ್ರ ರೈ, ಮರ್ಕಝುಲ್ ಹುದಾ ಕೋಶಾಧಿಕಾರಿ ಯೂಸುಫ್ ಗೌಸಿಯಾ ಸಾಜ,ಸದಸ್ಯರಾದ ಕರೀಂ ಹಾಜಿ ಕಾವೇರಿ, ಯೂಸುಫ್ ಮೈದಾನಿಮೂಲೆ, ಅಡ್ಮಿನಿಸ್ಟ್ರೇಶನ್ ಅಸಿಷ್ಟಂಟ್ ಶಬ್ನಾ ಪುತ್ತೂರು, ಶಮೀರ್ ಪರ್ಲಡ್ಕ ಉಪಸ್ಥಿತರಿದ್ದರು. ಮರ್ಕಝ್ ಪ್ಯಾರಾಮೆಡಿಕಲ್ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಸಲೀಂ ಸ್ವಾಗತಿಸಿ ವಂದಿಸಿದರು.