ನಿಡ್ಪಳ್ಳಿ: ಸ್ವಚ್ಚತಾ ಹೀ ಸೇವಾ-2025 ಕಾರ್ಯಕ್ರಮದ ಪೂರ್ವಭಾವಿ ಸಭೆ : ಸ್ವಚ್ಚತಾ ಕಾರ್ಯಕ್ರಮ

0

ನಿಡ್ಪಳ್ಳಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಭಾರತ ಸರಕಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ ಸರಕಾರ ವತಿಯಿಂದ ನಡೆಯುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪುತ್ತೂರು ಇವರ ನೇತೃತ್ವದಲ್ಲಿ ಸ್ವಚ್ಚತಾ ಹೀ ಸೇವಾ 2025ರ ಕಾರ್ಯಕ್ರಮದ ಪೂರ್ವಭಾವಿ ಸಭೆ ನಿಡ್ಪಳ್ಳಿ ಗ್ರಾಮ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸೆ.19 ರಂದು ನಡೆಯಿತು.    

 ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ನೊಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಸಭೆಯ ನಂತರ ಸಮುದಾಯ ಭವನದ ಬಳಿ ಹಾಗೂ ಕರ್ನಪ್ಪಾಡಿ ರಸ್ತೆ ಬದಿಗಳಲ್ಲಿ ಸ್ವಚ್ಛತೆ ಮಾಡಲಾಯಿತು. ಅಲ್ಲದೆ ಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. 

ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್,  ಅಭಿವೃದ್ಧಿ ಅಧಿಕಾರಿ ಸಂಧ್ಯಾಲಕ್ಷ್ಮಿ, ಕಾರ್ಯದರ್ಶಿ ಎಂ.ಶಿವರಾಮ ಮೂಲ್ಯ, ಸಮುದಾಯ ಆರೋಗ್ಯ ಅಧಿಕಾರಿ ಛಲವಾದಿ ಲಕ್ಷ್ಮಿ,  ಪಂಚಾಯತ್ ಸಿಬ್ಬಂದಿಗಳಾದ ರೇವತಿ, ಜಯಕುಮಾರಿ, ಗ್ರಂಥಪಾಲಕಿ ಪವಿತ್ರ.ಜಿ, ಆಶಾ ಕಾರ್ಯಕರ್ತೆಯರು, ಎಂ.ಬಿ.ಕೆ ಭವ್ಯ ಮತ್ತು  ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು ಎಲ್.ಸಿ.ಅರ್.ಪಿ ಗಳು, ಘನ ತ್ಯಾಜ್ಯ ಘಟಕ ನಿರ್ವಹಣೆಯ ಸ್ವಚ್ಛತಾ ಸಿಬ್ಬಂದಿಗಳು, ವಿ.ಆರ್ ಡ್ಬ್ಲ್ಯೂರಾಮ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here