ಪುತ್ತೂರು: ಪ್ರಗತಿ ಕಾಲೇಜಿನಿಂದ ಸೆ.14ರಂದು ಚಿಕ್ಕಮಗಳೂರು ಜಿಲ್ಲೆಯ ಶೋಲಾ ಅರಣ್ಯದಲ್ಲಿ ಮೂರು ದಿನಗಳ ಚಾರಣವನ್ನು ಆಯೋಜಿಸಲಾಗಿತ್ತು.

ಚಾರಣದಲ್ಲಿ 24 ವಿದ್ಯಾರ್ಥಿಗಳ ಜೊತೆ ಶಾಲೆಯ ಅಕೌಂಟೆಂಟ್ ನಿಶ್ಮಿತಾ ಹಾಗೂ ಶಾಲಾ ಸಂಚಾಲಕರಾದ ಗೋಕುಲ್ ನಾಥ್ ಪಿವಿ ಹಾಗೂ ಒಟ್ಟು 26 ವಿದ್ಯಾರ್ಥಿಗಳು. 1.30ಕ್ಕೆ ಕಾಲೇಜಿನಿಂದ ಹೊರಟು ಉಪ್ಪಿನಂಗಡಿ ಇಳಂತಿಲ್ಲ ಮಾರ್ಗವಾಗಿ ಉಜ್ಜಿರೆ ತಲುಪಿದರು. ಅಲ್ಲಿ ಬಂದಾರು ಗ್ರಾಮದಲ್ಲಿರುವ ಕಲ್ಲರ್ಬಿ ಹೊಳೆಯ ಸೇತುವೆ ಬಳಿ ಇಳಿದು ಅಲ್ಲಿ ಒಂದು 10 ನಿಮಿಷಗಳ ಕಾಲ ಸಮಯ ಕಳೆದರು. ವಾಹನಗಳ ಓಡಾಟ ಕಡಿಮೆ ಇದ್ದುದ್ದರಿಂದ ಫೋಟೋ ವನ್ನು ತೆಗೆದುಕೊಂಡು ಅಲ್ಲಿಂದ ಹೊರಟರು. 4 ಗಂಟೆಗೆ ಏರ್ಮಾಯಿ ಫಾಲ್ಸ್ ತಲುಪಿದ್ದು, ಅಲ್ಲಿಂದ ಎರಡು ತಂಡವನ್ನು ಮಾಡಿಕೊಂಡು 2 ಜೀಪಿನಲ್ಲಿ ಫಾಲ್ಸ್ ಕಡೆಗೆ 1 1/2 ಕಿಲೋಮೀಟರ್ ಪ್ರಯಾಣ ಬೆಳೆಸಿದರು. ಜೀಪಿನಿಂದ ಇಳಿದು 500 ಮೀ ನಡೆದು ಫಾಲ್ಸ್ ತಲುಪಿದ್ದು, ಅಲ್ಲಿ 1 ಗಂಟೆಗಳ ಕಾಲ ನೀರಿನಲ್ಲಿ ಆಟವಾಡಿ, ಫೋಟೋ ತೆಗೆದು ನಂತರ ಎಲ್ಲರೂ ಅಲ್ಲಿಂದ ಹೊರಟಿದ್ದು, ಜೀಪಿನಲ್ಲಿ ಬರುವಾಗ ಮಧ್ಯ ದಾರಿಯಲ್ಲಿ ಒಂದು ಚಿಕ್ಕ ಹೊಳೆಗೆ ಇಳಿದು ಫೋಟೋ ತೆಗೆದುಕೊಂಡು ಪುನಃ ಜೀಪನ್ನು ಹತ್ತಿ ಗಾಡಿ ಇರುವಲ್ಲಿಗೆ ಬಂದು ತಲುಪಿದರು.
ಅಲ್ಲಿಗೆ ತಲುಪುವಷ್ಟರಲ್ಲಿ 5.30 ಆಗಿತ್ತು. ಮತ್ತೆ ಅಲ್ಲೇ ಇದ್ದ ಹೋಟೆಲ್ ಗೆ ಹೋಗಿ ಚಹಾ ಕಾಫಿಯನ್ನು ಕುಡಿದು, ತಿಂಡಿಯನ್ನು ತಿಂದು ಅಲ್ಲಿಂದ ಹೋಂಸ್ಟೇ ಗೆ ತೆರಳಿದರು. ಚಾರ್ಮಾಡಿ ಘಾಟ್ ಮುಖಾಂತರ ಕೊಟ್ಟಿಗೆಹಾರವನ್ನು ತಲುಪಿ ಕಳಸ ಮಾರ್ಗವಾಗಿ ಜಾವಳಿ ಸುಂಕಸಾಲೆಯಲ್ಲಿರುವ ಸುದರ್ಶನ್ ಹೋಂ ಸ್ಟೇಯಲ್ಲಿ ತಂಗಿದರು. ಅಲ್ಲಿ ಸ್ನಾನವನ್ನು ಮುಗಿಸಿ ಎಲ್ಲರೂ ಆಚೆ ಬಂದ ವೇಳೆ ಅಷ್ಟರಲ್ಲಿ ಊಟ ತಯಾರಾಗಿತ್ತು. ಊಟಕ್ಕೆ ಬಿರಿಯಾನಿ, ರೈಸ್, ಚಿಕನ್ ಕರಿ, ಚಪಾತಿ ಎಲ್ಲವನ್ನು ಮಾಡಿದ್ದರು. ಊಟ ಅಂತೂ ತುಂಬ ರುಚಿರುಚಿಯಾಗಿ ಇತ್ತು. ಊಟ ಮುಗಿಸಿ ಎಲ್ಲರೂ ಕ್ಯಾಂಪ್ ಫೈಯರ್ ಬಳಿ ಬಂದು. ಅಲ್ಲಿ ಸ್ವಲ್ಪ ಗಂಟೆಗಳ ಕಾಲ ಮಾತನಾಡಿ ಹಾಗೂ ಕೆಲವರು ಡಿಜೆ ಹಾಕಿಕೊಂಡು ನೃತ್ಯ ಮಾಡಿದರು. ಹೀಗೆ 11:00ಕ್ಕೆ ಅವರವರ ಕೋಣೆಗೆ ತೆರಳಿ ನಿದ್ರೆಗೆ ಜಾರಿದರು.
ಸೆ.15 ರಂದು ಬೆಳಗ್ಗೆ 6:00 ಗಂಟೆಗೆ ಎಲ್ಲರೂ ಎದ್ದು ಸ್ನಾನವನ್ನು ಮುಗಿಸಿದರು. ಕೆಲವರು ಶಟಲ್ ಬ್ಯಾಟ್ ಅನ್ನು ಆಡಿದರು. 8 ಅಷ್ಟರಲ್ಲಿ ತಿಂಡಿಯನ್ನು ಮುಗಿಸಿ, ತಿಂಡಿಗೆ ಇಡ್ಲಿ ಸಾಂಬಾರ್, ಚಟ್ನಿ, ಚಿಕನ್ ಸಾಂಬಾರ್, ಲೆಮನ್ ರೈಸ್ ಇತ್ತು. ಹೀಗೆ 8.30ಕ್ಕೆ ಬಂಡಾಜೆ ಫಾಲ್ಸ್ ಗೆ ಚಾರಣಕ್ಕೆ ಹೊರಟು, ಹೋಂಸ್ಟೇಯಿಂದ ಎರಡು ಪಿಕಪ್ ಅನ್ನು ಮಾಡಿಕೊಂಡು ಬಂಡಾಜೆ ಫಾಲ್ಸ್/ ಬಲ್ಲಾಳ ರಾಯನಕೋಟೆ ಎಂಟ್ರಿ ಪಾಯಿಂಟ್ ಹತ್ತಿರ ಇಳಿದು ಅಲ್ಲಿಂದ ಎಲ್ಲರೂ ಗುಂಪಾಗಿ ಪ್ರಯಾಣವನ್ನು ಬಂಡಾಜೆ ಫಾಲ್ಸ್ ಕಡೆಗೆ ತೆರಳಿದರು. ದಾರಿಯಲ್ಲಿ ಹೋಗುತ್ತಾ ಕ್ಯಾಮರದಲ್ಲಿ ಫೋಟೋವನ್ನು ತೆಗೆದುಕೊಂಡು ಮಾತನಾಡಿಕೊಂಡು ನಡಿಗೆಯನ್ನು ಸಾಗಿಸಿದರು. ಆ ಗುಡ್ಡದ ದುರ್ಗಮ ದಾರಿಯನ್ನು ಹೇಗೋ ಇಳಿದು ಹತ್ತುತ್ತಾ ಮಧ್ಯದಲ್ಲಿ ಮಳೆಯ ತಂಪನ್ನು ಅನುಭವಿಸುತ್ತಾ 9 ಕಿಲೋಮೀಟರ್ ನಡೆದು ಬಲ್ಲಾಳರಾಯನ ದುರ್ಗಾ ಕೋಟೆ, ರೋರಿಂಗ್ ಲಯನ್ view ಪಾಯಿಂಟ್, ಟೋಪಿ ಬೆಟ್ಟದ ಮೂಲಕ 4250 feet ಎತ್ತರದಲ್ಲಿರುವ ಬಂಡಾಜೆ ಫಾಲ್ಸ್ ತಲುಪಿದ್ದು, ಆ ಫಾಲ್ಸ್ ಅಲ್ಲಿಯೇ ತೆಗೆದುಕೊಂಡು ಹೋಗಿದ್ದ ಊಟವನ್ನು ಮುಗಿಸಿ ಮತ್ತೆ ಸ್ವಲ್ಪ ವಿಶ್ರಾಂತಿ ಪಡೆದುಕೊಂಡು, ಅಲ್ಲಿಂದ 100 ಮೀಟರ್ ಹತ್ತಿರದಲ್ಲೇ ಇದ್ದ ಒಂದು ಬಯಲಾದ ಬಂಡೆಕಲ್ಲುಗಳಿರುವ ತಂಪಾದ ಜಾಗದಲ್ಲಿ ಹೋಗಿ ಕುಳಿತುಕೊಂಡು, ನಂತರ ಎಲ್ಲರೂ ಅಲ್ಲಿಂದ ಹಿಂದಿರುಗಿ ಹೊರಟು. ಪುನಃ 9 ಕಿಲೋಮೀಟರ್ ಹೇಗೋ ಕಷ್ಟ ಪಟ್ಟು ಹತ್ತುತ್ತಾ ಬಂದು, ಹಿಂದಿರುಗಿ ಬರುವಾಗ ಸ್ವಲ್ಪ ಬಿಸಿಲಿನ ವಾತಾವರಣ ಆ ಹಕ್ಕಿಗಳ ಕೂಗು ಅದರ ಜೊತೆ ಆ ವಿಮಾನ ಹಕ್ಕಿಗಳ ಹಾರಾಟ ಎಂಥ ಅದ್ಭುತ ದೃಶ್ಯ ಎನಿಸಿತು. ಹೀಗೆ 5.30 ಸುಮಾರಿಗೆ ಹಿಂದಿರುಗಿ ಗೇಟ್ ಹತ್ತಿರ ಬಂದಿದ್ದು, ನಂತರ ಮತ್ತೆ ಬಲ್ಲಾಳರಾಯನ ಕೋಟೆಗೆ ತೆರಳಿದ್ದು, ಅಲ್ಲಿಂದ 6200 feet ಎತ್ತರದಲ್ಲಿರುವ ರಾಣಿ ಝರಿಗೆ ಹೋಗಿ ಬಂದಿದ್ದು, ನಂತರ 6.30 ಗಂಟೆಗೆ ಪಿಕಪ್ ಹತ್ತಿಕೊಂಡು ಎಲ್ಲರೂ ಹೋಂ ಸ್ಟೇಗೆ ತಲುಪಿದ್ದು. ಅವರು ನಮಗೆ ಬಿಸಿಬಿಸಿಯಾಗಿ ಚಹಾ ತಿಂಡಿಗಳನ್ನು ಮಾಡಿ ಇಟ್ಟಿದ್ದು, ಎಲ್ಲರೂ ಚಹಾ ತಿಂಡಿಯನ್ನು ತಿಂದು ನಂತರ ಸ್ನಾನವನ್ನು ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆದು, ನಂತರ 8.00ಕ್ಕೆ ಊಟ ಮಾಡಿ ಕ್ಯಾಂಪ್ ಫೈರ್ ಮಾಡಿಕೊಂಡು ಎಲ್ಲಾರು ಡಂಬಶೇರಟ್ಸ್ ಆಡಿಕೊಂಡು ಕಾಲ ಕಳೆದಿದ್ದು, ಹಾಗೆ 10.00 ಗಂಟೆ ಸುಮಾರಿಗೆ ನಿದ್ರೆಗೆ ಜಾರಿದರು.
ಸೆ.16 ರಂದು 7.00 ಗಂಟೆಗೆ ಎಲ್ಲರೂ ಎದ್ದು ಹೊರಟು 8.00 ಸುಮಾರಿಗೆ ತಿಂಡಿ ಮಾಡಿ, 8.30 ಸುಮಾರಿಗೆ ಅಲ್ಲಿಂದ ಹೊರಟು ದೇವರ ಮನೆ ಕಡೆ ಪ್ರಯಾಣ ಬೆಳೆಸಿದ್ದು, ಅಲ್ಲೇ ಹೋಗುತ್ತಾ ದಾರಿಯಲ್ಲಿ ಒಂದು ಗುಡ್ಡಕ್ಕೆ ಹೋಗಿ ಪುನಃ ಅಲ್ಲಿಂದ ಎತ್ತಿನಭುಜಕ್ಕೆ ಪ್ರಯಾಣ ಬೆಳೆಸಿ, ಎಲ್ಲರೂ ಎತ್ತಿನ ಭುಜದ ಎಂಟ್ರಿ ಪಾಯಿಂಟ್ ಹತ್ತಿರ ಹೋಗಿ ಊಟವನ್ನು 12.45ಕ್ಕೆ ಮುಗಿಸಿ, ಅಷ್ಟರಲ್ಲಿ ಚಾರಣವನ್ನು ಪ್ರಾರಂಭಿಸಿ, ಇದ್ದದ್ದು 5 ಕಿಲೋಮೀಟರ್ ದಾರಿ ಆದರೆ ಅದನ್ನು ಹತ್ತಿದ್ದು ದೊಡ್ಡ ಸಾಹಸವೇ ಸರಿ. 1.30 ಅಷ್ಟರಲ್ಲಿ ಎತ್ತಿನ ಭುಜವನ್ನು ಹತ್ತಿ ಮುಗಿಸಿ, ನಂತರ ಒಂದು ಗಂಟೆಗಳ ಕಾಲ ಅಲ್ಲೇ ಸಮಯವನ್ನು ಕಳೆದು ಫೋಟೋವನ್ನು ತೆಗೆದುಕೊಂಡು ನಂತರ ಹಿಂದಿರುಗಿ ಹೊರಟು, 4 ಗಂಟೆ ಅಷ್ಟರಲ್ಲಿ ಚಾರಣವನ್ನು ಮುಗಿಸಿ ಅಲ್ಲಿಯೇ ಇದ್ದ ಒಂದು ಅಂಗಡಿಯಲ್ಲಿ ಚಹಾವನ್ನು ಕುಡಿದು, ಪ್ರಯಾಣವನ್ನು ಪುತ್ತೂರಿನ ಕಡೆಗೆ ಬೆಳೆಸಿ, 9.00 ಗಂಟೆ ಅಷ್ಟರಲ್ಲಿ ಮನೆಗಳನ್ನು ತಲುಪುವ ಮೂಲಕ ಚಾರಣಕ್ಕೆ ಪೂರ್ಣ ವಿರಾಮವನ್ನಿಡಲಾಯಿತು.