ಕಾವು: ಮಾಡ್ನೂರು ಗ್ರಾಮದ ನನ್ಯ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಸಪ್ತಾಹ ಕಾರ್ಯಕ್ರಮ ಸೆ 17 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತೆ ನವ್ಯ ಪೌಷ್ಟಿಕ ಆಹಾರ ಸಪ್ತಾಹ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜನರಿಗೆ ಉತ್ತಮ ಮಾನಸಿಕ ಆರೋಗ್ಯ ಹಾಗೂ ಮಾನಸಿಕ ಅಸ್ಪೃಶ್ಯತೆಯ ಬಗ್ಗೆ ಮತ್ತು ಮಕ್ಕಳ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸುವ ಹಲವು ವಿಚಾರಗಳ ಮಾಹಿತಿಯನ್ನು ಇಂಚರ ಸಮಾಲೋಚನಾ ಕೇಂದ್ರ ಪುತ್ತೂರು ಇದರ ಆಪ್ತ ಸಮಾಲೋಚಕಿ ಸೌಮ್ಯ ಮಾಹಿತಿ ನೀಡಿದರು.

ನನ್ಯ ಶಾಲಾ ಶಿಕ್ಷಕಿ ಸವಿತಾ ಮಕ್ಕಳ ಬುದ್ಧಿ ಕಲಿಕೆಯ ಬಗ್ಗೆ ಮಾಹಿತಿ ನೀಡಿದರು, ಅರಿಯಡ್ಕ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ನವೀನ ಬಿ ಡಿ ಆರೋಗ್ಯ ಮತ್ತು ಮಾನವನ ಶರೀರದ ನೋವುಗಳನ್ನು ತಡೆಗಟ್ಟುವ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಾಲವಿಕಾಶ ಸಮಿತಿಯ ಅಧ್ಯಕ್ಷರಾದ ಶಿಲ್ಪಶ್ರೀ ಮಿನೋಜಿಕಲ್,ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಅನಿತಾ ಆಚಾರಿಮೂಲೆ,ಜಯಂತಿ ಪಟ್ಟುಮೂಲೆ ಉಪಸ್ಥಿರಿದ್ದರು.
ಬಾಲವಿಕಾಸ ಸಮನ್ವಯ ಸಮಿತಿಯ ಸದಸ್ಯರಾದ ಬೇಬಿ ಬಜಕುಡೆಲು, ಪ್ರತಿಮಾ ನಿಧಿಮುಂಡ , ಪದ್ಮಾವತಿ ಬಜಕೂಡೇಲು,ಕವಿತಾ,ಗೌರಿ, ವೇದಾವತಿ ,ಉಷಾ, ಶಾರದಾ,ನಳಿನಿ, ವಿನಿತಾ, ನಿಲಾವತಿ, ಅನಿತಾ, ಶಿಲ್ಪಾ ಶ್ರೀ ಪೌಷ್ಟಿಕ ಆಹಾರ ತಯಾರಿಸಿದ್ದರು. ಇವರುಗಳಿಗೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ಭಾಸ್ಕರ ಬಲ್ಯಾಯರ ಪ್ರಾಯೋಜಕತ್ವದಲ್ಲಿ ಬಹುಮಾನ ವಿತರಣೆ ನಡೆಯಿತು.ಪುಟಾಣಿಗಳಾದ ಪರೀಕ್ಷಿತ್, ಯಸ್ವಿತ್ ,ಚಿತೇಶ್, ಐರಾ, ನಿವೇದ್ ಪ್ರಾರ್ಥಿಸಿದರು,ಅಂಗನವಾಡಿ ಕಾರ್ಯಕರ್ತೆ ಸೀತಾರತ್ನ ಸ್ವಾಗತಿಸಿದರು ,ಸಹಾಯಕಿ ಶಾರದ ಸಹಕರಿಸಿದರು.