ವಿಟ್ಲ: ಮಾಣಿ ವಲಯದ ಮಿತ್ತೂರಿನ ವಾತ್ಸಲ್ಯ ಪಲಾನುಭವಿ ಅರುಣ್ ಕುಮಾರ್ ರವರ ಪುತ್ತ ರಿತೇಶ್ ರವರ ವಿದ್ಯಾಭ್ಯಾಸಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ವಿದ್ಯಾನಿಧಿ ಸಹಾಯಧನ ವಿತರಣೆ ಮಾಡಲಾಯಿತು.
ಮಾಣಿ ವಲಯದ ಜನಜಾಗೃತಿ ಅಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ರವರು ವಿದ್ಯಾನಿಧಿ ಸಹಾಯಧನ ವಿತರಿಸಿದರು. ಬೀಡಿನಮಜಲು ಶ್ರೀ ಆದಿ ಪರಾಶಕ್ತಿ ದೇವಸ್ಥಾನದ ಗೌರವಾಧ್ಯಕ್ಷರಾದ ಸುರೇಶ್ ಮುಕ್ಕಡ, ವಲಯ ಮೇಲ್ವಿಚಾರಕಿ ಆಶಾ ಪಾರ್ವತಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ದೀಪಾ, ಸೇವಾ ಪ್ರತಿನಿಧಿ ಸುಗಂಧಿನಿ, ಒಕ್ಕೂಟದ ಜೊತೆ ಕಾರ್ಯದರ್ಶಿ ಸವಿತಾ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.