*ಸೆ.22 ಉತ್ಸವಕ್ಕೆ ಚಾಲನೆ
ಸೆ.30 ಚಂಡಿಕಾಯಾಗ, ಬಲಿವಾಡುಕೂಟ
ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಸೆ.22ರಿಂದ ಸೆ.30ರವರೆಗೆ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ, ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.30ರಂದು ವಿಶೇಷವಾಗಿ ಬೆಳಿಗ್ಗೆ ಚಂಡಿಕಾಯಾಗ ಊರ ಭಕ್ತಾದಿಗಳಿಂದ ಬಲಿವಾಡು ಕೂಟ, ಮಹಾಪೂಜೆ, ಅನ್ನಸಂತರ್ಪಣೆ ನಡೆದು ರಾತ್ರಿ ಭಜನೆ, ರಂಗಪೂಜೆ ಪ್ರಸಾದ ವಿತರಣೆ ನಡೆಯಲಿರುವುದು. ಉತ್ಸವದಲ್ಲಿ ಪ್ರತಿ ದಿನ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಭಜನೆ, ರಂಗಪೂಜೆ ನಡೆಯಲಿದೆ.
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಮಧ್ಯಾಹ್ನದ ಅನ್ನದಾನ ಹಾಗೂ ರಂಗಪೂಜೆ ಸೇವೆ ನಡೆಯುತ್ತಿದ್ದು ಸೆ.22ರಂದು ಬೈಲುಗುತ್ತು ಕುಟುಂಬಸ್ಥರು ಮತ್ತು ಬಂಧುಗಳು, ಸೆ.23ರಂದು ಕೋಡಂದೂರು ಮನೆತನದ ಕುಟುಂಬ ಮತ್ತು ಬಂಧು-ಭಾಂಧವರು, ಸೆ.24ರಂದು ಪರಿಯಾಲು ದಿ.ಮೋನಪ್ಪ ರೈಯವರ ಬಗ್ಗೆ ಸೇವೆ, ಸೆ.25ರಂದು ಶಿವಣ್ಣ ನಾಯಕ್ ಪುಣಚ ಮತ್ತು ಕುಟುಂಬಸ್ಥರು, ಸೆ.26ರಂದು ದಲ್ಕಾಜೆಗುತ್ತು ಕುಟುಂಬಸ್ಥರು ಮತ್ತು ಬಂಧುಗಳು, ಸೆ.27ರಂದು ದೊಡ್ಡಮನೆ ಕುಟುಂಬಸ್ಥರು, ಸೆ.28ರಂದು ಮಣಿಲ ಶಾಸ್ತ್ರಿ ಮನೆಯವರು, ಸೆ.29ರಂದು ಪಟಿಕಲ್ಲು ಲಕ್ಷ್ಮೀನಾರಾಯಣ ಭಟ್ ಮತ್ತು ಸಹೋದರರ ಸೇವಾ ರೂಪದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಪ್ರಕಟಣೆ ತಿಳಿಸಿದೆ.