32 ಕೋಟಿ ರೂ. ವ್ಯವಹಾರ, 12.51 ಲಕ್ಷ ರೂ. ನಿವ್ವಳ ಲಾಭ, ಶೇ. 15 ಡಿವಿಡೆಂಡ್- ಜಗನ್ನಾಥ ರೈ
ಪುತ್ತೂರು: ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ.20 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿ ಮಾತನಾಡಿ, ಬಂಟಸಿರಿ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ರೂ, 32,03,18,128 ವಾರ್ಷಿಕ ವ್ಯವಹಾರ ಮಾಡಿದ್ದು, 6.69 ಕೋಟಿ ಠೇವಣಿ ಸಂಗ್ರಹವನ್ನು ಮಾಡಲಾಗಿದೆ.5.41 ಕೋಟಿ ರೂ. ಸಾಲ ವಿತರಿಸಿ, 12.51 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸದಸ್ಯರುಗಳಿಗೆ ಶೇ 15 ಡಿವಿಡೆಂಡ್ ನೀಡಲಾಗುವುದು, 2026ರ ಮಾರ್ಚ್ ಅಂತ್ಯಕ್ಕೆ ರೂ 10 ಕೋಟಿಯಷ್ಟು ಠೇವಣಿ ಸಂಗ್ರಹ ಮತ್ತು 8 ಕೋಟಿ ರೂ. ಸಾಲ ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
2013ರಲ್ಲಿ ಸ್ಥಾಪನೆ:
ಪುತ್ತೂರು ತಾಲೂಕಿನಲ್ಲಿ ಬಂಟ ಸಮುದಾಯದಿಂದ 2013 ರಲ್ಲಿ ಸ್ಥಾಪಿತವಾದ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘ ಇದೀಗ 12 ನೇ ವರ್ಷದಲ್ಲಿ ಪ್ರಗತಿಯ ಪಥದಲ್ಲಿ ಮುನ್ನಡೆದು, ಸಹಕಾರ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆಯುತ್ತಿದೆ. ಈ ವರ್ಷ 15 ಶೇ. ಡಿವಿಡೆಂಡ್‌ನ್ನು ಸದಸ್ಯರುಗಳಿಗೆ ನೀಡುವ ಮೂಲಕ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ಈಗಾಗಲೇ ಕಡಬ ತಾಲೂಕಿನ ಅಲಂಕಾರು, ಪುತ್ತೂರು ತಾಲೂಕಿನ ಈಶ್ವರಮಂಗಲ ಹಾಗೂ ಸುಳ್ಯ ತಾಲೂಕಿನ ನಿಂತಿಕಲ್‌ನಲ್ಲಿ ಸಂಘದ ಶಾಖೆಗಳು ಅತ್ಯುತ್ತಮ ರೀತಿಯಲ್ಲಿ ವ್ಯವಹಾರ ಮಾಡುತ್ತಿದ್ದು, ನಮ್ಮ ಎಲ್ಲಾ ಸದಸ್ಯರುಗಳು ಹಾಗೂ ಆಡಳಿತ ಮಂಡಳಿಯ ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರುಗಳು ಮತ್ತು ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು ಹಾಗೂ ಸಿಬ್ಬಂದಿ ವರ್ಗದ ಸಹಕಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು. ಆಡಳಿತ ಮಂಡಳಿಯ ನಿರ್ದೇಶಕರಾದ ಸಂಜೀವ ಆಳ್ವ ಹಾರಾಡಿ, ಬೂಡಿಯಾರ್ ರಾಧಾಕೃಷ್ಣ ರೈ, ಪುರಂದರ ರೈ ಮಿತ್ರಂಪಾಡಿ, ಚನಿಲ ತಿಮ್ಮಪ್ಪ ಶೆಟ್ಟಿ,ಬಾಲಕೃಷ್ಣ ಶೆಟ್ಟಿ ಕೊಂಡೆವೂರು, ವಿದ್ಯಾ ಪ್ರಸಾದ್ ಆಳ್ವ ಉಪ್ಪಳಿಗೆ, ಅನಿತಾ ಹೇಮನಾಥ ಶೆಟ್ಟಿ, ಬಾಲಕೃಷ್ಣ ರೈ ಅನಾಜೆ, ಶ್ರೀನಿವಾಸ ರೈ ನುಳಿಯಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಸದಸ್ಯರುಗಳಾದ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ನಾರಾಯಣ ರೈ ಪರ್ಪುಂಜಬಾರಿಕೆ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿ, ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ, ಸದಾಶಿವ ಶೆಟ್ಟಿ ಮಾರಂಗ ಮತ್ತಿತರರು ಸಲಹೆ ಸೂಚನೆ ನೀಡಿದರು. ಸಂಸ್ಥೆಯ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲುರವರು ವರದಿ ವಾಚಸಿದರು. ಸಂಸ್ಥೆಯ ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಸ್ವಾಗತಿಸಿ, ನಿರ್ದೇಶಕ ವಸಂತ ಕುಮಾರ್ ರೈ ದುಗ್ಗಳ ವಂದಿಸಿದರು. ಸಿನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಪುತ್ತೂರು ಘಟಕದ ಅಧ್ಯಕ್ಷೆ ಮಲ್ಲಿಕಾ ಜೆ.ರೈ ಪ್ರಾರ್ಥಿಸಿ,ಕಾರ್‍ಯಕ್ರಮ ನಿರೂಪಿಸಿದರು. ಈಶ್ವರಮಂಗಲ ಶಾಖಾ ವ್ಯವಸ್ಥಾಪಕಿ ಪ್ರೇಮ ಎಸ್ ರೈ, ಅಲಂಕಾರು ಶಾಖಾ ವ್ಯವಸ್ಥಾಪಕಿ ಸುಮತಿ ರೈ, ನಿಂತಿಕಲ್ ಶಾಖೆಯ ವ್ಯವಸ್ಥಾಪಕಿ ರಕ್ಷಿತಾ ರೈ, ಗುಮಸ್ತರಾದ ತೇಜಸ್ ಶೆಟ್ಟಿ, ಬ್ರಜೇಶ್ ಶೆಟ್ಟಿ, ಶ್ರಾವ್ಯಶ್ರೀ ರೈರವರು ಸಹಕರಿಸಿದರು.
ಶ್ರದ್ಧಾಂಜಲಿ-
ಸಂಘದ ಹಾಲಿ ನಿರ್ದೇಶಕ ನುಳಿಯಾಲು ಜಯರಾಮ ರೈಯವರ ಅಕಾಲಿಕ ನಿಧಾನಕ್ಕೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿತು. ಮೃತರ ಬಗ್ಗೆ ನಿರ್ದೇಶಕ ಮಿತ್ರಂಪಾಡಿ ಪುರಂದರ ರೈ ಮಾತನಾಡಿ ಸಂತಾಪ ಸೂಚಿಸಿದರು.
ಬಂಟಸಿರಿ ಅದ್ಬುತ ಸಾಧನೆ
ಬಂಟಸಿರಿ ಸಹಕಾರ ಸಂಸ್ಥೆಯು ಉತ್ತಮ ಸಾಧನೆಯನ್ನು ಮಾಡುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಅದ್ಬುತ ಪ್ರಗತಿ ಸಾಧಿಸಿದೆ. ಸಂಸ್ಥೆಗೆ ಉತ್ತಮ ಆಡಳಿತ ಮಂಡಳಿ ಇದೆ, ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲುರವರು ಹೆಚ್ಚಿನ ಮುತುವರ್ಜಿಯಿಂದ ಕೆಲಸವನ್ನು ನಿರ್ವಹಿಸಿ, ಶೇ. 99.5 ಸಾಲ ವಸೂಲಾತಿ ಸಾಧ್ಯವಾಗಿದೆ ಎಂದರು ಮತ್ತು ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸಹಕಾರದಲ್ಲಿ ಸಂಸ್ಥೆಯು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ..
ನುಳಿಯಾಲು ಜಗನ್ನಾಥ ರೈ, ಅಧ್ಯಕ್ಷರು
ಸಹಕಾರ ಕ್ಷೇತ್ರದಲ್ಲಿ ಸಾಧನೆ
ಸಹಕಾರ ಕ್ಷೇತ್ರ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು, ಬಂಟಸಿರಿ ಸಹಕಾರ ಸಂಸ್ಥೆಯು ಸಹಕಾರ ತತ್ವ ಹಾಗೂ ಸಿದ್ಧಾಂತದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಸಹಕಾರ ಬಂಧುಗಳ ಪೂರ್ಣ ಸಹಕಾರ ಸಂಸ್ಥೆಗೆ ದೊರೆತಿದೆ.
ದಯಾನಂದ ರೈ ಮನವಳಿಕೆಗುತ್ತು ಉಪಾಧ್ಯಕ್ಷರು
ಗ್ರಾಹಕರಿಗೆ ಉತ್ತಮ ಸೇವೆ
ಬಂಟಸಿರಿ ಸಹಕಾರ ಸಂಸ್ಥೆಯಲ್ಲಿ ಗ್ರಾಹಕರಿಗೆ ಕ್ಲಪ್ತ ಸಮಯದಲ್ಲಿ ಸಾಲವನ್ನು ನೀಡುತ್ತೇವೆ. ಈ ಬಾರಿ ೯೯.೫ ಶೇ ಸಾಲ ವಸೂಲಾತಿ ಆಗಿದ್ದು, ಬ್ಯಾಂಕ್ `ಎ’ ಗ್ರೇಡ್ ಪಡೆದಿರುವುದು ಗ್ರಾಹಕರ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯು ಮತ್ತಷ್ಟು ಅಭಿವೃದ್ಧಿ ಆಗಲಿದ್ದು, ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆಯಲಾಗುವುದು.
ಸತೀಶ್ ರೈ ನಡುಬೈಲು, ಮುಖ್ಯಕಾರ್‍ಯನಿರ್ವಹಣಾಧಿಕಾರಿ