ಕಡಬದಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಸಭೆ

0

ಆಹಾರ ನಿರೀಕ್ಷಕ ಎಂ.ಎಲ್. ಶಂಕರ ರವರಿಗೆ ಗೌರವಾರ್ಪಣೆ

ಆಲಂಕಾರು: ಗ್ರಾಮ ಒನ್‌ ನಾಗರಿಕ ಸೇವಾಕೇಂದ್ರಗಳ ಸಂಘ ಕಡಬ ತಾಲೂಕು ಇದರ ಸಭೆಯು ಕಡಬ ಅಂಬೇಡ್ಕರ್‌ ಭವನದಲ್ಲಿ ನಡೆಯಿತು. ಕಡಬ ಉಪತಹಶೀಲ್ದರರಾದ ಗೋಪಾಲ .ಕೆ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದಲ್ಲಿ ನೀಡುವ ಸೇವೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿ ಆಹಾರ ನಿರೀಕ್ಷಕರಾದ ಎಂ.ಎಲ್ ಶಂಕರ ರವರ ಸೇವೆಯನ್ನು ಗುಣಗಾನ ಮಾಡಿ ಶುಭಹಾರೈಸಿದರು.


ಸಭೆಯಲ್ಲಿ ಕಡಬ ಆಹಾರ ಇಲಾಖೆಯಲ್ಲಿ ಆಹಾರ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಂಕರ್‌ ರವರು ಉಪತಹಶೀಲ್ದರರಾಗಿ ಭಡ್ತಿ ಹೊಂದಿ ಮಂಡ್ಯಕ್ಕೆ ವರ್ಗಾವಣೆಯಾಗುತ್ತಿರುವ ಸಂದರ್ಭದಲ್ಲಿ ಕಡಬ ತಾಲೂಕು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ವತಿಯಿಂದ ಸನ್ಮಾನಿಸಲಾಯಿತು.ನಂತರ ಮಾತನಾಡಿದ ಆಹಾರ ನಿರೀಕ್ಷಕರಾದ ಎಂ.ಎಲ್ ಶಂಕರ ರವರು ಕಡಬ ಆಹಾರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ನನಗೆ ಬಹಳ ಖುಷಿ ಕೊಟ್ಟಿದೆ. ಇಲಾಖೆಗಳಲ್ಲಿ ಪದನ್ನೋತಿಗೊಂಡು ವರ್ಗಾವಣೆಯಾಗುವುದು ಸಹಜ.ಸೇವಾ ಸಂಧರ್ಭದಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿ ವರ್ಗದವರಿಗೆ,ಸೇವಾ ಕೇಂದ್ರದವರಿಗೆ,ಜನರಿಗೆ ಕೃತಜ್ಞತೆ ಸಲ್ಲಿಸಿದರು.

ಸಂಪನ್ಮೂಲ ವ್ಯಕ್ತಿ ಸುರೇಶ್ ಕರಿಕ್ಕಳ ರವರು ಗ್ರಾಮ ಒನ್‌ ನಾಗರಿಕ ಸೇವಾ ಕೇಂದ್ರಗಳು ಯಾವ ರೀತಿಯಲ್ಲಿ ಸೇವೆ ನೀಡಬಹುದು ಎನ್ನುವ ಬಗ್ಗೆ ಮಾಹಿತಿ ನೀಡಿದರು.ಇನ್ನ್ಸೂರೇನ್ಸ್ ದೇಕೂ ವತಿಯಿಂದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಜ್ವಲ್ ರವರು ಪ್ರಸಕ್ತ ಸನ್ನಿವೇಶದಲ್ಲಿ ವಿಮೆಯ ಮಹತ್ವ ಮತ್ತು ಸೇವೆಯ ಬಗ್ಗೆ ತಿಳಿಸಿದರು.


ಸಭೆಯ ಅಧ್ಯಕ್ಷತೆಯನ್ನು ಕಡಬ ತಾಲ್ಲೂಕು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಅಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗ ಅಧಿಕಾರಿ ವರ್ಗದವರು ಮತ್ತು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದವರು‌ ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೇ ಮಾತ್ರ ಗ್ರಾಮ‌ಮಟ್ಟದಲ್ಲಿ ಜನರಿಗೆ ಉತ್ತಮ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ. ಈ‌ ನಿಟ್ಟಿನಲ್ಲಿ ಆಹಾರ ನಿರೀಕ್ಷಕರಾದ ಶಂಕರ ರವರು ಉತ್ತಮ ಸೇವೆಯನ್ನು ನೀಡಿದ್ದಾರೆ ಎಂದು ತಿಳಿಸಿ ಶುಭಹಾರೈಸಿದರು.ಸೇವಾ ಕೇಂದ್ರಗಳ ಪರವಾಗಿ ವಿನೋದ್ ಬಳ್ಪರವರು ಆಹಾರ ನೀರಿಕ್ಷಕರಾದ ಎಂ.ಎಲ್ ಶಂಕರ ರವರ ಸೇವೆಯನ್ನು ಗುಣಗಾನ ಮಾಡಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳು ಉತ್ತಮ ಸೇವೆ ನೀಡಬೇಕಾದರೆ ಅಧಿಕಾರಿ ವರ್ಗದವರ ಸಹಕಾರ ಅತೀ ಅಗತ್ಯ ಎಂದು ತಿಳಿಸಿದರು.

ಕೋಶಾಧಿಕಾರಿ ಪ್ರವೀಣ್ .ಡಿ ಕಾರ್ಯಕ್ರಮ ನಿರೂಪಿಸಿ,ಪವಿತ್ರ ಎನ್ ಸ್ವಾಗತಿಸಿ, ಕಾರ್ಯದರ್ಶಿ ಪದ್ಮನಾಭ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಭಾಸ್ಕರ ಹಿರಿಂಜ,ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ರಾಘವೇಂದ್ರ, ಗ್ರಾಮ ಒನ್ ನಾಗರಿಕ ಸೇವಾಕೇಂದ್ರಗಳ ರವಿವರ್ಮ ಎಣ್ಮೂರು, ಗುಣಶೀಲ ಕೆ ಕೌಕ್ರಾಡಿ,ರಮ್ಯ ಗೋಳಿತೊಟ್ಟು, ಅಕ್ಷತಾ ಕೌಕ್ರಾಡಿ, ಚಂದ್ರಶೇಖರ ಬೆಳಂದೂರು, ಚಿದಾನಂದ ಕೊಯಿಲ, ಲೋಲಾಕ್ಷ ಶೆಟಿ ಮರ್ಧಾಳ, ದೀಕ್ಷಿತ್‌ ಕುಮಾರ್‌ ಬಿಳಿನೆಲೆ, ಅಪೇಕ್ಷಾ ಎಡಮಂಗಲ, ಪ್ರಜ್ಞಾ ಐತ್ತೂರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here