ಪುತ್ತೂರು: ಅನಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮಹಾಸಭೆಯು ಸಪ್ಟೆಂಬರ್ 19 ರಂದು ನಡೆಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಯಂ ವನಜಾಕ್ಷಿ ಮಾತನಾಡಿ,121415.05 ಲೀ ಹಾಲು ಖರೀದಿಯಾಗಿದೆ, 12525.50 ಲೀ ಸ್ಥಳೀಯ ಹಾಲು ಮಾರಾಟವಾಗಿದೆ.482910.82 ರೂ ಹಾಲು ವ್ಯಾಪಾರ ಲಾಭ. 22407.00ರೂ ಪಶು ಆಹಾರ ವ್ಯಾಪಾರ ಲಾಭ. 20167.57ರೂ ಇತರ ಆದಾಯ, ಒಟ್ಟು 297377.50 ರೂ. ನಿವ್ವಳ ಲಾಭ, ಸದಸ್ಯರಿಗೆ ಲೀಟರ್ ಗೇ1.17 ಪೈಸೆ ಬೋನಸ್, 10% ಡಿವೆಡೆಂಡ್ ಘೋಷಣೆ ಮಾಡಲಾಗುತ್ತದೆ.
ಸಂಘ ಪ್ರಾರಂಭವಾದಾಗ 180 ಲೀಟರ್ ಹಾಲು ಇತ್ತು. ಈಗ ಎರಡನೇ ವರ್ಷಕ್ಕೆ ಕಾಲಿಟ್ಟಾಗ 400 ಲೀಟರ್ ಕ್ಕಿಂತ ಹೆಚ್ಚು (400 ಲೀ) ಹಾಲು ಆಗಿದೆ. ಇದು ತುಂಬಾ ಸಂತೋಷದ ವಿಷಯ ಎಲ್ಲಾ ಸದಸ್ಯರು ಹೈನುಗಾರಿಕೆಯಲ್ಲಿ ಆಸಕ್ತಿ ತೋರಿಸಿದ್ದಾರೆ. ಹಾಲಿನ ಸೊಸೈಟಿ ನಮ್ಮ ಊರಲ್ಲಿ ಮಾಡಿದ ಪ್ರಯತ್ನಕ್ಕೆ ಸಾರ್ಥಕವಾಯಿತು. ಹಾಗೆಯೇ ಮೊದಲನೆಯ ವರ್ಷ 105788.24 ರೂಪಾಯಿ ಲಾಭಬಂದಿದೆ. ಈ ವರ್ಷ ನಿಮಗೆ 297377.50 ಲಾಭ ಬಂದಿದೆ ಹೇಳಲು ಹೆಮ್ಮೆ ಆಗಿದೆ ಎಂದರು.
ದ.ಕ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ, ಸಂಘದಲ್ಲಿ ಪಶು ಆಹಾರವನ್ನು ಬಳಸಲು ಹೇಳಿದರು. ಎಲ್ಲಾ ಸದಸ್ಯರಿಗೆ ಆಪ್‌ನ್ನು ಎಲ್ಲಾರು ಇನ್ಸಾಲ್ ಮಾಡಿಸಿ ಅದರಲ್ಲಿ ಹಾಲಿನ ಮಾಹಿತಿ ಸದಸ್ಯರಿಗೆ ತಿಳಿಯುತ್ತದೆ. ಯಾವುದೇ ತಪ್ಪು ಮಾಹಿತಿ ಬರುದಿಲ್ಲ ಈ ಆಪ್ ನಲ್ಲಿ ಬಂದ ಹಾಲು ಒಕ್ಕೂಟದವರೆಗೆ ಮಾಹಿತಿ ಹೋಗುತ್ತದೆ. ಎಂದು ಹೇಳಿದರು. ಸಂಘದ ಅಸುಪಾಸಿನಲ್ಲಿ ಜೋಳವನ್ನು ಬೆಳೆಸಲು ಮಾಹಿತಿ ನೀಡಿದರು.
ದ.ಕ ಹಾಲು ಒಕ್ಕೂಟದ ಪಶುವೈದ್ಯಾಧಿಕಾರಿ ಡಾ.ಅನುದೀಪ್ ರವರು ಮಾತನಾಡಿ, ಹೈನು ರಾಸು ನಿರ್ವಹಣಾ ಆಹಾರ ನೀಡಬೇಕು. ಕೆಚ್ಚಲುಬಾಹು ಹೇಗೆ ಬರುತ್ತದೆ, ಕರುಗಳು ಎಷ್ಟು ವರ್ಷದಲ್ಲಿ ಜೋಡಿಗೆ ಬರುತ್ತದೆ. ಎಂದು ಸಂಪೂರ್ಣ ಮಾಹಿತಿ ನೀಡಿದರು. ಕ್ಷೀರ ಸಂಜೀವಿನಿ ಹಂತ-4 ಸ್ಟೆಪ್ ಯೋಜನೆಯ ಅಧಿಕಾರಿಯಾದ ನಳಿನಿ ಯವರು ಮಹಿಳಾ ಸೊಸೈಟಿಯವರು ಮಹಿಳೆಯರು ಯಾವ ರೀತಿ ಮಾತನಾಡಬೇಕು. ಮಹಿಳೆಯರು ಎಲ್ಲಾ ರೀತಿಕಾನೂನು ಮಾಹಿತಿತಿಳಿದಿಕೊಂಡಿರಬೇಕು. ಮಹಿಳೆಯವರು ಧೈರ್ಯದಿಂದ ಎಲ್ಲಾ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಯಾದ ಶ್ರೀದೇವಿ ಮಾತನಾಡಿ, ಒಕ್ಕೂಟದಿಂದ ಸಿಗುವ ಯೋಜನೆಗಳ ಬಗ್ಗೆ ತಿಳಿಸಿದರು. ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಹಾಕಲುತಿಳಿಸಿದರು. ಹಾಲನ್ನು ಕರೆಯುವಾಗ ಮತ್ತು ಸೊಸೈಟಿಗೆ ತರುವಾಗ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ತಿಳಿಸಿದರು. ಸಂಘದ ಕಾರ್ಯದರ್ಶಿ ದಿವ್ಯಾ 2024 ನೇ-25 ನೇ ಸಾಲಿನ ವಾರ್ಷಿಕ ವರದಿಯನ್ನು ಓದಿ ಮಂಜೂರುಗೊಳಿಸದರು. 2024-25 ನೇ ಸಾಲಿನ ನಿವ್ವಳ ಲಾಭ ಎಲೆವರಿ ಮತ್ತು ವಿತರಣೆಯನ್ನು ತಿಳಿಸಿದರು.2025-26 ನೇ ಸಾಲಿನ ಅಂದಾಜು ಆಯ ವ್ಯಯ ಮಂಡಿಸಿದರು. 2024-25 ನೇ ಸಾಲಿನಲ್ಲಿ ಅತಿ ಹೆಚ್ಚು ಹಾಲು ಪೂರೈಸಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.ವಿಜಯ ವಿಠಲ ಶೆಟ್ಟಿ ಪ್ರಥಮ, ವಿಮಲ ಶಿವಣ್ಣಗೌಡ ದ್ವೀತಿಯ ಬಹುಮಾನ ಮತ್ತು ಲತಾ ಅಶೋಕ ಗೌಡ ತೃತೀಯ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. 2024-25 ನೇ ಸಾಲಿನಲ್ಲಿ ಹಾಲು ಪೂರೈಕೆ ಮಾಡಿದ ಎಲ್ಲಾ ಸದಸ್ಯರಿಗೆ ಬಹುಮಾನ ನೀಡುವುದೆಂದು ತಿಳಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಕೃತಕ ಗರ್ಭಕಾರ್ಯಕರ್ತ ವಿಕಿಶ್ ಶೆಟ್ಟಿ ಹಾಗೂ ಪಶುಸಖಿಯಾದ ಸೌಮ್ಯ ದಿನೇಶ್ ಉಪಸ್ಥಿತರಿದ್ದರು
ಸಂಘದ ನಿರ್ದೇಶಕರಾದ ಇಂದಿರಾ ಯಚ್, ಸದಸ್ಯರಾದ ವಿದ್ಯಾ ಕೆ. ರೇವತಿ ರವರು ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷರಾದ ಜ್ಯೋತಿ ನಾಯಕ್ ನಿರೂಪಿಸಿದರು. ಸಂಘದ ನಿರ್ದೇಶಕರಾದ ಇಂದಿರಾ ಯಜ್ ಸ್ವಾಗತಿಸಿದರು. ಸಂಘದ ನಿರ್ದೇಶಕರಾದ ಲತಾ ಪಿ ವಂದಿಸಿದರು. ಹಾಲು ಪರಿವೀಕ್ಷಕಿ ರೇಣುಕ ಸಹಕರಿಸಿದರು.