ಆಲಂಕಾರು: ಆಲಂಕಾರು ಬುಡೇರಿಯಾ ಕ್ರಾಸ್ ಬಸ್ಸು ನಿಲ್ದಾಣದಲ್ಲಿ ಬಳಿ ಕಳೆದ 20 ದಿವಸಗಳಿಂದ ಅನಾಥವಾಗಿ ಪಲ್ಸರ್ ಬೈಕ್ ನಿಂತಿರುವ ಘಟನೆ ನಡೆದಿದೆ.

ಆಲಂಕಾರು ಕುದ್ಮಾರು ರಾಜ್ಯ ಹೆದ್ದಾರಿಯ ಬದಿಯಲ್ಲಿ ಬುಡೇರಿಯಾ ಕ್ರಾಸ್ ನಲ್ಲಿ ಕಳೆದ 20 ದಿವಸಗಳಿಂದ ಕೆಎ 21 ಯು 2934 ನಂಬರ್ ಪಲ್ಸರ್ ಬೈಕ್ ಆನಾಥವಾಗಿ ರಸ್ತೆ ಬದಿಯಲ್ಲಿ ನಿಂತಿದ್ದು, ಈ ಬಗ್ಗೆ ಸ್ಥಳಿಯರು ಕಡಬ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.