ಸೆ.24: ಪುತ್ತೂರಿನಲ್ಲಿ ಟೈಟಾನ್ ವರ್ಲ್ಡ್ ಶೋರೂಮ್ ಉದ್ಘಾಟನೆ

0

10 ಸಾವಿರಕ್ಕೂ ಅಧಿಕ ವಾಚ್‌ಗಳ ಆಯ್ಕೆ ನಿಮ್ಮ ಮುಂದೆ

ಪುತ್ತೂರು: ಪ್ರತಿಷ್ಠಿತ ವಾಚ್ ತಯಾರಕ ಕಂಪನಿ ಟೈಟಾನ್‌ನ ಎಕ್ಸ್‌ಕ್ಲೂಸಿವ್ ಶೋರೂಮ್ ಟೈಟಾನ್ ವರ್ಲ್ಡ್ ಸೆ.24 ರಂದು ಬೊಳುವಾರಿನಲ್ಲಿರುವ ಇನ್‌ಲ್ಯಾಂಡ್ ಮಯೂರದಲ್ಲಿ ಉದ್ಘಾಟನೆಗೊಳ್ಳಲಿದೆ. ಇದು ಬೆಳೆಯುತ್ತಿರುವ ಪುತ್ತೂರಿಗೆ ಮತ್ತೊಂದು ಗರಿಯಾಗಲಿದೆ.


ಟೈಟನ್ ಕಂಪನಿಯ ದಕ್ಷಿಣ ವಿಭಾಗದ ರೀಜಿನಲ್ ಬ್ಯುಸಿನೆಸ್ ಹೆಡ್ ಅಜಯ್ ದ್ವಿವೇದಿ ಶೋರೂಮ್ ಉದ್ಘಾಟಿಸಲಿದ್ದು, ಕಂಪನಿ ವಾಚ್‌ಗಳ ರೀಜನಲ್ ಬ್ಯುಸಿನೆಸ್ ಮ್ಯಾನೇಜರ್ ಪ್ರಶಾಂತ್ ಜಯಪ್ರಕಾಶ್, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕ ಸಂಘದ ಮಾಜಿ ಅಧ್ಯಕ್ಷ ಪಿ ವಾಮನ್ ಪೈ ಪಾಲ್ಗೊಳ್ಳಲಿದ್ದಾರೆ.


ಟೈಟಾನ್, ಫಾಸ್ಟ್ ಟ್ರಾಕ್, ಸೋನಾಟ ಸೇರಿದಂತೆ ವಿವಿಧ ಬ್ರ್ಯಾಂಡಿನ ವಾಚ್‌ಗಳು ಇಲ್ಲಿ ಲಭ್ಯವಿದೆ. ಮಕ್ಕಳ ಝೂಪ್ ವಾಚ್‌ಗಳು, ಮಹಿಳೆಯರ ರಾಗಾ, ಪರ್ಪಲ್ ವಾಚ್‌ಗಳು, ಪುರುಷರ ಒಕ್ಟೇನ್, ರಿಗಾಲಿಯೋ, ದಂಪತಿಗಳಿಗೆ ಸಂಬಂಧಿಸಿದ ಬಂಧನ್ ಪ್ಯಾರ್ ವಾಚ್‌ಗಳು, ಜಗತ್ತಿನ ಅತೀ ಸ್ಲಿಮ್‌ಸ್ಟ್ ವಾಚ್ ಆಗಿರುವ ಟೈಟಾನ್ ಎಡ್ಜ್ ವಾಚ್‌ಗಳು ಸೇಲ್ಸ್ ಮತ್ತು ಸರ್ವಿಸ್ ದೊರೆಯಲಿದೆ. ಮಳಿಗೆಯಲ್ಲಿ ಕನಿಷ್ಠ ಬೆಲೆ ರೂ.795 ರಿಂದ ಪ್ರಾರಂಭಿಸಿ ಗರಿಷ್ಠ 49,999ರ ಬೆಲೆಯ ವಿವಿಧ ಮಾದರಿಯ ವಾಚ್‌ಗಳು ಹಾಗೂ ಬ್ರ್ಯಾಂಡೆಡ್ ಸ್ಕಿನ್ ಪೃಫ್ಯೂಮ್ ಲಭ್ಯವಿದೆ.

ಪ್ರತಿ ಖರೀದಿ ಮೇಲೆ ಗಿಫ್ಟ್
ಟೈಟಾನ್ ವರ್ಲ್ಡ್ ಶೋರೂಮ್ ಉದ್ಘಾಟನೆಯ ಪ್ರಯುಕ್ತ ಗ್ರಾಹಕರಿಗೆ ಆಫರ್ ಘೋಷಿಸಲಾಗಿದೆ. ಪ್ರತಿ ಖರೀದಿ ಮೇಲೆ ಗ್ರಾಹಕರು ಗಿಫ್ಟ್‌ವೊಂದನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಮಾಲಕ ಪ್ರಸನ್ನ ಕೆ.ಆರ್. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here