ಜನರ ಬೇಡಿಕೆ ಮನ್ನಿಸಿ ನಾಟಿ ಕೋಳಿಯನ್ನು ನೀಡುತ್ತಿದ್ದೇವೆ: ಶಾಸಕ ಅಶೋಕ್ ರೈ

0

ಪ.ಪಂಗಡ 40, ಸಾಮಾನ್ಯ 4, ಪ.ಜಾತಿ 2 ಒಟ್ಟು 46 ಮಹಿಳೆಯರಿಗೆ


ಪುತ್ತೂರು: ಇಷ್ಟು ವರ್ಷ ಪಶು ಸಂಗೋಪನಾ ಇಲಾಖೆಯಿಂದ ಗಿರಿರಾಜ ಕೋಳಿ ಮರಿಗಳನ್ನು ನೀಡಲಾಗುತ್ತಿತ್ತು, ಆದರೆ ಈ ಬಾರಿ ಜಿಲ್ಲೆಯ ಜನರ ಬೇಡಿಕೆಯಂತೆ ನಾಟಿ ಕೋಳಿ‌ಮರಿಗಳನ್ನು ವಿತರಣೆ ಮಾಡುತ್ತಿದ್ದೇವೆ. ಮಹಿಳೆಯರ ಸ್ವ-ಉದ್ಯೋಗಕ್ಕೂ ಇದು ಪ್ರೇರಣೆಯಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಪಶು ಸಂಗೋಪನಾ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಅರ್ಹ 46 ಮಹಿಳೆಯರಿಗೆ 5 ವಾರದ ಕೋಳಿ ಮರಿಗಳನ್ನು ವಿತರಿಸಲಾಗಿದೆ.

ಪ.ಪಂಗಡದ 40, ಸಾಮಾನ್ಯ 4 ಹಾಗೂ ಪ.ಜಾತಿ 2 ಕುಟುಂಬದ ಒಟ್ಟು 46 ಮಂದಿಗೆ ಮರಿಗಳನ್ನು ವಿತರಣೆ ಮಾಡಲಾಯಿತು.


ನಾಟಿ ಕೋಳಿಗೆ ಉತ್ತಮ ಬೇಡಿಕೆ ಇದ್ದು ಮಹಿಳೆಯರು ಮನೆಯಲ್ಲಿ‌ ನಾಟಿ ಕೋಳಿಗಳನ್ನು ಸಾಕುವ ಮೂಲಕ ಸ್ವ-ಉದ್ಯೋಗವನ್ನು ಮಾಡಿ ಉತ್ತಮ ಲಾಭವನ್ನು ಗಳಿಸಬಹುದು ಎಂದು ಹೇಳಿದ ಶಾಸಕರು ಸರಕಾರ ಉಚಿತ ಗ್ಯಾರಂಟಿ ಯೋಜನೆಯ ಜೊತೆಗೆ ಇನ್ನಿತರ ಉಚಿತ ಸ್ವಾವಲಂಬಿ ಯೋಜನೆಗಳನ್ನು ಜಾರಿಗೆ ತಂದು ಬಡವರ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದು ಶಾಸಕರು ಹೇಳಿದರು.


ತಾಲೂಕು ಪಶು ವೈದ್ಯಾಧಿಕಾರಿ ಡಾ.ಧರ್ಮಪಾಲ ಅವರು ಸ್ವಾಗತಿಸಿ, ಸರಕಾರದಿಂದ ಸಿಗುವ ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here