ಪುತ್ತೂರು ಪಶುಸಂಗೋಪನಾ ಇಲಾಖೆಯಿಂದ ನಾಟಿ ಕೋಳಿ ಮರಿ ವಿತರಣೆ

0

ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸಹಾಯಕಾರಿ-ಅಶೋಕ್ ಕುಮಾರ್ ರೈ

ಪುತ್ತೂರು: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ವತಿಯಿಂದ ಪಶುಪಾಲನಾ ಇಲಾಖೆಗೆ ಸಂಬಂಧಿಸಿ 2024-25ನೇ ಸಾಲಿನ ನಾಟಿ ಕೋಳಿ ಮರಿ ವಿತರಣೆ ಪುತ್ತೂರು ಶಾಸಕರ ಕಛೇರಿಯ ಆವರಣದಲ್ಲಿ ನಡೆಯಿತು.


ಶಾಸಕ ಅಶೋಕ್ ಕುಮಾರ್ ರೈ ಫಲಾನುಭವಿಗಳಿಗೆ ಕೋಳಿಮರಿ ವಿತರಿಸಿ ಮಾತನಾಡಿ ಕೋಳಿ ಸಾಕಾಣಿಕೆ ಕೂಡ ಒಂದು ಕೃಷಿಯಾಗಿದೆ. ನಮ್ಮ ಫಾರ್ಮ್‌ನ ಕೋಳಿಮಾಂಸ
ಮನೆಯಲ್ಲಿ ಹಿರಿಯರಿಗೆ ಕೋಳಿಮರಿ, ಹೇಂಟೆ ಸಾಕಿದರೆ ಮೊಟ್ಟೆ ಕೂಡ ಸಿಗುತ್ತದೆ. ನಾಟಿ ಕೋಳಿಗೆ ಉತ್ತಮ ಬೇಡಿಕೆ ಇದೆ. ಇದರ ಸಾಕಾಣಿಕೆ ಸುಲಭ, ಇದರಿಂದ ಉದ್ಯೋಗವೂ ಆಗುತ್ತದೆ ಅಲ್ಲದೆ ಆದಾಯವೂ ಬರುತ್ತದೆ. ಆದುದರಿಂದ ಕೋಳಿ ಸಾಕಾಣಿಕೆಯ ಅರಿವು ಮೂಡಿಸಲು ಕೋಳಿ ಮರಿ ವಿತರಿಸಲಾಗುತ್ತದೆ ಈ ಮೂಲಕ ಗ್ರಾಮೀಣ ಬಡ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಇದು ಸಹಾಯವಾಗಲಿದೆ ಎಂದು ಹೇಳಿ ಕೋಳಿ ಮರಿಯನ್ನು ಉತ್ತಮವಾಗಿ ಸಾಕಾಣಿಕೆ ಮಾಡಿ ಎಂದರು. ಪುತ್ತೂರು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ ಗೌಡ ಸ್ವಾಗತಿಸಿ ವಂದಿಸಿದರು. ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ ಶೆಟ್ಟಿ, ಪಾಣಾಜೆ ಕೇಂದ್ರದ ಮುಖ್ಯ ಪಶು ವೈದ್ಯಾಧಿಕಾರಿ ಎಂ.ಪಿ.ಪ್ರಕಾಶ್, ನರಿಮೊಗರು ಕೇಂದ್ರದ ಪಶುವೈದ್ಯಾಧಿಕಾರಿ ಖಾಸಿಂ, ಕೌಡಿಚ್ಚಾರು ಕೇಂದ್ರದ ಪಶುವೈದ್ಯ ಪರೀಕ್ಷಕ ವೀರಪ್ಪ ಹಾಗೂ ಇಲಾಖೆಯ ಸಿಬಂದಿಗಳು ಉಪಸ್ಥಿತರಿದ್ದರು.

48 ಫಲಾನುಭವಿಗಳಿಗೆ ತಲಾ 15ರಂತೆ ಕೋಳಿ ಮರಿ ವಿತರಣೆ

ಒಟ್ಟು 48 ಮಹಿಳಾ ಫಲಾನುಭವಿಗಳಿಗೆ ತಲಾ 15 ಕೋಳಿ ಮರಿಗಳನ್ನು ವಿತರಿಸಲಾಯಿತು. ಪರಿಶಿಷ್ಟ ಪಂಗಡದ 40, ಸಾಮಾನ್ಯ ವರ್ಗದ 4 ಹಾಗೂ ಪರಿಶಿಷ್ಟ ಜಾತಿಯ 2 ಫಲಾನುಭವಿಗಳಿಗೆ 5 ವಾರದ ಅವಧಿಯ ಕೋಳಿ ಮರಿಗಳನ್ನು ಶಾಸಕರು ವಿತರಿಸಿದರು.

LEAVE A REPLY

Please enter your comment!
Please enter your name here