ಪುತ್ತೂರು: ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ನವರಾತ್ರಿ ಉತ್ಸವವು ಸೆ.22ರಿಂದ ಸೆ.30ರವರೆಗೆ ನಡೆಯಲಿದೆ. ಸೆ.22ರಂದು ಬೆಳಿಗ್ಗೆ ಶ್ರೀ ದೇವರ ಗದ್ದಿಗೆ ಏರಿತು. ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷರು ಚಂದ್ರಹಾಸ ಎಂ. ರೈ, ಬಾಳಿಕೆ ಮನೆ, ಬನ್ನೂರು, ಉದ್ಯಮಿ ಮುಂಬೈ, ಅಧ್ಯಕ್ಷರಾದ ಯು. ಲೋಕೇಶ ಹೆಗ್ಡೆ, ಸಂಚಾಲಕರು ಕೆ. ರಾಜಣ್ಣ (ಧರ್ಮದರ್ಶಿ), ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಗೌಡ ಬುಡ್ಲೆಗುತ್ತು, ಗಣೇಶ್ ಕರ್ಮಲ, ಕೋಶಾಧಿಕಾರಿ ದಿನೇಶ್ ಕರ್ಮಲ, ಉಪಾಧ್ಯಕ್ಷರಾದ ಜಗದೀಶ ಶೆಟ್ಟಿ, ನೆಲ್ಲಿಕಟ್ಟೆ, ಉತ್ಸವ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ (Rtd PSI) ಬನ್ನೂರು ಕರ್ಮಲ, ಉಪಾಧ್ಯಕ್ಷರಾದ ಮಹಾಲಿಂಗ ಪಾಟಾಳಿ, ಪ್ರಧಾನ ಕಾರ್ಯದರ್ಶಿ ಚಂದ್ರಯ್ಯ ಕರ್ಮಲ, ಜೊತೆ ಕಾರ್ಯದರ್ಶಿ ತಾರಾನಾಥ ಬನ್ನೂರು, ರಮೇಶ ಉಪಸ್ಥಿತರಿದ್ದರು.
