ವಿಟ್ಲ: ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯೋರ್ವನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಅಶ್ರಫ್ ಯಾನೆ ಚಿಲ್ಲಿ ಅಶ್ರಫ್(32) ಬಂಧಿತ ಆರೋಪಿ.
ವಿಟ್ಲ ಪೇಟೆಯಲ್ಲಿ 2015ರ ಅ.07ರಂದು ಜಗದೀಶ್ ಕಾಮತ್ ಎಂಬವರಿಗೆ ಮೆಣಸಿನ ಪುಡಿ ಎರಚಿ, ದರೋಡೆ ಮಾಡಿದ ಆರೋಪಿ ಅಶ್ರಫ್ ವಿರುದ್ಧ ಪ್ರಕರಣ ದಾಖಲಾಗಿತ್ತು. 2016ರ ಜ.23ರಂದು ಕೊಳ್ನಾಡು ಗ್ರಾಮದ ವೈನ್ ಶಾಪ್ ಬಾಗಿಲು ಮುರಿದು ನಗದು ಕಳ್ಳತನ ಮಾಡಿದ್ದು, ಈತನ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿತ್ತು.
ಎರಡೂ ಪ್ರಕರಣಗಳಲ್ಲಿ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದ ಅಶ್ರಫ್ ವಿರುದ್ಧ ನ್ಯಾಯಾಲಯದಿಂದ 82 & 83 ವಾರಂಟ್ ಜಾರಿಯಾಗಿತ್ತು. ಮಂಜೇಶ್ವರ ತಾಲೂಕು ಕೂಳೂರಿನ ಅಶ್ರಫ್ ನನ್ನು ಸೆ.21ರಂದು ಕೂಳೂರು ಮಂಜೇಶ್ವರ ಎಂಬಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.