ಬೊಳುವಾರಿನಲ್ಲಿರುವ ಪ್ರಗತಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‌ಸ್ ನಲ್ಲಿ ಬಿಎಸ್ಸಿ ನರ್ಸಿಂಗ್ ಪ್ರಥಮ ಬ್ಯಾಚ್ ಉದ್ಘಾಟನೆ

0

ಉತ್ತಮ ಸಾಧನೆ ಮಾಡಲು ಗುರಿ ಮುಖ್ಯ: ಡಾ. ಯು. ಶ್ರೀಪತಿ ರಾವ್
ನರ್ಸಿಂಗ್ ಎನ್ನುವುದು ಉದಾತ್ತವೃತ್ತಿ: ಡಾ. ಸುಧಾ ಎಸ್. ರಾವ್

ಪುತ್ತೂರು: ಬೊಳುವಾರಿನಲ್ಲಿರುವ ಪ್ರಗತಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‌ಸ್ ನಲ್ಲಿ 2025-26ನೇ ಸಾಲಿಗೆ ಹೊಸದಾಗಿ ಪ್ರವೇಶ ಪಡೆದಿರುವ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳ ಕೋರ್ಸ್ ಉದ್ಘಾಟನಾ ಸಮಾರಂಭವು ಕಾಲೇಜಿನ‌‌ ಸಭಾಂಗಣದಲ್ಲಿ ಸೆ.22ರಂದು ನಡೆಯಿತು.

ಟ್ರಸ್ಟ್ ನ ಚೇರ್‌ಮನ್ ಡಾ. ಯು. ಶ್ರೀಪತಿ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೀಪ‌ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆಸ್ಪತ್ರೆಯಲ್ಲಿ ಶುಶ್ರೂಶಕರ ಮಹತ್ವ, ಶುಶ್ರೂಶಕರಿಗೆ ಇರುವ ಗುಣಗಳ ಬಗ್ಗೆ ತಿಳಿಸಿದರು. ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಗುರಿ ಮುಖ್ಯ ಎಂದ ಅವರು ತನ್ನ ವೃತ್ತಿ ಜೀವನದಲ್ಲಿ ಅದಂತಹ ಅನುಭವಗಳನ್ನು ಉದಾಹರಣೆ ಕೊಡುವ ಮೂಲಕ ವಿವರಿಸಿದರು.

ಟ್ರಸ್ಟಿ ಡಾ. ಸುಧಾ ಎಸ್ ರಾವ್ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಕರುಣೆ, ಸಹಾನುಭೂತಿ ಮತ್ತು ಸಂವಹನ ಕೌಶಲ್ಯವನ್ನು ಮೈಗೂಡಿಸಿಕೊಂಡು ರೋಗಿಯ ಆರೈಕೆ ಮಾಡಬೇಕು. ನರ್ಸಿಂಗ್ ಎನ್ನುವುದು ಉದಾತ್ತವೃತ್ತಿ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಪ್ರೀತಾ ಹೆಗ್ಡೆ , ಸಾರ್ವಜನಿಕ ಸಂಪರ್ಕಾಧಿಕಾರಿ ಎಮ್. ಸಂತೋಷ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಸಂಸ್ಥೆಯ ಮೂಲ ಸೌಕರ್‍ಯಗಳನ್ನು ಶಾಲೆಟ್ ಡಿಸೋಜ ನರ್ಸಿಂಗ್ ಟ್ಯುಟರ್ ವಿವರಿಸಿದರು. ಸೆಮಿಸ್ಟರ್ ಬಗ್ಗೆ ಪೀಡಿಯಾಟ್ರಿಕ್ ನರ್ಸಿಂಗ್ ವಿಭಾಗದ ಉಪನ್ಯಾಸಕಿ ರೇಶ್ಮಾ ವಿವರಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಪ್ರೋ. ಹೇಮಲತಾ ಜಿ. ಸ್ವಾಗತಿಸಿ, ಕಾಲೇಜಿನ ನಿಯಮಗಳು ಮತ್ತು ನಿಬಂಧನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ರೇಶ್ಮಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಮ್ಯೂನಿಟಿ ಹೆಲ್ತ್ ನರ್ಸಿಂಗ್ ವಿಭಾಗದ ಉಪನ್ಯಾಸಕಿ ಅನಿತಾ ಸಿ.ಜಿ ವಂದಿಸಿದರು.

LEAVE A REPLY

Please enter your comment!
Please enter your name here