ಪುತ್ತೂರು: ನಗರಸಭಾ ಮಾಜಿ ಸದಸ್ಯರು ಪುತ್ತೂರು ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷ ಪಾಂಡುರಂಗ ಹೆಗ್ಡೆಯವರ ಪತ್ನಿ ಚಂದ್ರಕಲಾ ಹೆಗ್ಡೆ (76ವ) ಅವರು ಸೆ.24 ರಂದು ನಿಧನರಾದರು.
ಕೊಂಬೆಟ್ಟು ನಿವಾಸಿ ಚಂದ್ರಕಲಾ ಹೆಗ್ಡೆ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ನಿಧನರಾದರು. ಮೃತರು ಪತಿ ಪಾಂಡುರಂಗ ಹೆಗ್ಡೆ, ಪುತ್ರರಾದ ನರೇಶ್ ಹೆಗ್ಡೆ, ಯತೀಶ್ ಹೆಗ್ಡೆ , ಪುತ್ರಿ ಶ್ವೇತ ಹೆಗ್ಡೆ ಮತ್ತು ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.