ಪುತ್ತೂರು: ಪ್ರತಿ ವರ್ಷ ಸೆಪ್ಟೆಂಬರ್ 29ರಂದು ಆಚರಿಸಲಾಗುವ ವಿಶ್ವ ಹೃದಯ ದಿನದ ಅಂಗವಾಗಿ, ಡಾ. ರೈ ಹೋಮಿಯೋಪಥಿ ಸೆಂಟರ್ ನ ತಜ್ಞ ವೈದ್ಯರು ವಿಶೇಷ ಹೃದಯ ಆರೋಗ್ಯ ತಪಾಸಣಾ ಶಿಬಿರ ಸೆಪ್ಟೆಂಬರ್ 27ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಡೆಯಲಿದೆ.
ಶಿಬಿರದಲ್ಲಿ ಉಚಿತ ಬಿ.ಪಿ ತಪಾಸಣೆ, ಉಚಿತ ಹೋಮಿಯೋಪಥಿಕ್ ಸಲಹೆ ಮತ್ತು ಮಾರ್ಗದರ್ಶನ, ರಿಯಾಯಿತಿ ದರದಲ್ಲಿ ಹೋಮಿಯೋಪಥಿಕ್ ಔಷಧಿ ಲಭ್ಯತೆ, ರಕ್ತದೊತ್ತಡ, ಹೆಚ್ಚಿದ ಕೊಲೆಸ್ಟ್ರಾಲ್, ಮಕ್ಕಳ ಆನುವಂಶಿಕ ಹೃದಯ ಕಾಯಿಲೆಗಳು, ಬೊಜ್ಜುತನ, ಉಸಿರಾಟದ ತೊಂದರೆ, ಹೃದಯಾಘಾತ ತಡೆಗಟ್ಟುವ ಮಾರ್ಗಗಳು ಇತ್ಯಾದಿಗಳ ಬಗ್ಗೆ ವಿಶೇಷ ಪ್ರಾಮುಖ್ಯತೆ ಯನ್ನು ಈ ಶಿಬಿರದಲ್ಲಿ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೊದಲ 20 ನೋಂದಣಿಗಳಿಗೆ ಮಾತ್ರ ಅವಕಾಶ, ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ 8123870254 ನಂಬರನ್ನು ಸಂಪರ್ಕಿಸಬಹುದು ಪ್ರಕಟನೆಯಲ್ಲಿ ತಿಳಿಸಿದೆ.