ಪುತ್ತೂರು:ವೃತ್ತಿಪರ ಇಂಜಿನಿಯರ್ಗಳಿಗೆ ಸಹಕಾರ ನೀಡುವುದು,ಕಾಮಗಾರಿಯಲ್ಲಿ ಗುಣಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಹುಟ್ಟಿಕೊಂಡ ರಾಷ್ಟ್ರೀಯ ಸಂಸ್ಥೆಯಾಗಿರುವ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ಇಂಜಿನಿಯರ್ಸ್ ಡೇ ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ನೂತನ ಪದಾಽಕಾರಿಗಳ ಪದಪ್ರದಾನ ಕಾರ್ಯಕ್ರಮ ಸೆ.22ರಂದು ಸಂಜೆ ಮರೀಲ್ನಲ್ಲಿರುವ ದಿ ಪುತ್ತೂರು ಕ್ಲಬ್ನಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಹಿರಿಯ ಇಂಜಿನಿಯರ್ಸ್ಗಳಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಘಟನೆ ಗಟ್ಟಿಯಾದರೆ ರಾಷ್ಟ್ರಮಟ್ಟದಲ್ಲಿ ಶಕ್ತಿ ಬರುತ್ತದೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ರಾಜೇಂದ್ರ ಕಲ್ಬಾವಿ ಅವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿದರು.ಬಳಿಕ ಮಾತನಾಡಿದ ಕಲ್ಬಾವಿ, ಸಂಘಟನೆ ಅಸ್ತಿತ್ವದಕ್ಕೆ ಬಂದು ಅತಿ ಕಡಿಮೆ ಅವಧಿಯಲ್ಲಿ ಮಾಡಿದ ಕೆಲಸ ನೋಡಿದರೆ ಇದರ ಪೂರ್ಣ ಕ್ರೆಡಿಟ್ ನಿರ್ಗಮಿತ ಅಧ್ಯಕ್ಷ ಪ್ರಮೋದ್ ಅವರಿಗೆ ಸಲ್ಲುತ್ತದೆ.ತನ್ನ ಕೆಲಸದ ಒತ್ತಡದ ನಡುವೆಯೂ ಸಂಘದ ಕೆಲಸವನ್ನೂ ಚಾಚೂ ತಪ್ಪದೆ ಮಾಡಿರುವುದು ಅವರ ಕೆಲಸದ ಕಾರ್ಯಕ್ಷಮತೆಯನ್ನು ತೋರಿಸುತ್ತದೆ.ಪುತ್ತೂರು ಸಂಘವು, ತನ್ನನ್ನು ಹುಟ್ಟು ಹಾಕಿದ ಬೆಳ್ತಂಗಡಿ ಸಂಘದಿಂದಲೂ ಮುಂದಿದೆ.ಒಂದು ತಾಲೂಕು ಮಟ್ಟದ ಸಂಘ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆಯಲು ಎಷ್ಟು ಶ್ರಮವಿದೆ ಎಂಬುದಕ್ಕೆ ಪುತ್ತೂರು ಸಂಘ ಮಾದರಿಯಾಗಿದೆ.ನಿಮ್ಮ ಶ್ರಮ ಹೀಗೆ ಮುಂದುವರಿಯಲಿ.ನೂತನ ಅಧ್ಯಕ್ಷರಿಗೆ ಸಂಘವನ್ನು ಮುನ್ನಡೆಸುವ ಜವಾಬ್ದಾರಿ ಇದೆ.ಮುಂದೆ ಸುಳ್ಯದಲ್ಲಿ ಸೆಂಟರ್ ಸ್ಥಾಪಿಸುವಂತೆ ಬಂಟ್ವಾಳದಲ್ಲೂ ನಿಮ್ಮ ನೇತೃತ್ವದಲ್ಲೇ ಸಂಘ ಸ್ಥಾಪನೆಯಾಗಲಿ.ಸಂಘಟನೆ ಗಟ್ಟಿ ಮಾಡಿದರೆ ರಾಷ್ಟ್ರಮಟದಲ್ಲಿ ಶಕ್ತಿ ಬರುತ್ತದೆ.ಊರು ಊರಿನಲ್ಲೂ ಸಂಘ ಬೆಳೆಯಬೇಕು.ನಿಮ್ಮ ಒಗ್ಗಟ್ಟು ಹೀಗ ಮುಂದುವರಿಯಲಿ ಎಂದರು.ಇದೇ ಸಂದರ್ಭದಲ್ಲಿ ಪುತ್ತೂರು ಸಂಘದಿಂದ ಅವರನ್ನು ಸನ್ಮಾನಿಸಲಾಯಿತು.
ಯುವ ಇಂಜಿನಿಯರ್ಗಳು ಅವಕಾಶ ಬಳಸಿಕೊಳ್ಳಿ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರು ಸಿಎಮ್ಟಿಐ ಸ್ಥಾಪಕರು ಮತ್ತು ಸಿಇಒ ಆಗಿರುವ ಅಶೋಕ್ ಕುಮಾರ್ ಅವರು ಮಾತನಾಡಿ,ಪುತ್ತೂರು ಸಂಘ ಅತ್ಯುತ್ತಮ ಚಟುಚಟಿಕೆ ಸಂಘಟನೆ ಮಾಡಿದ್ದೀರಿ.ನಮ್ಮ ದೇಶದಲ್ಲಿ ಹಲವು ಉತ್ತಮ ಯೋಜನೆಗಳು ರೂಪೀಕರಿತವಾಗಬೇಕಾಗಿದೆ.ಇದಕ್ಕಾಗಿ ಮುಂದಿನ ದಿನ ಯುವ ಇಂಜಿನಿಯರ್ಗಳಿಗೆ ಉತ್ತಮ ಅವಕಾಶವಿದೆ.ಅದನ್ನು ಬಳಸಿಕೊಳ್ಳುವಲ್ಲಿ ಯುವ ಇಂಜಿನಿಯರ್ಗಳು ಮುಂದೆ ಬರಬೇಕು ಎಂದರು.
ಪ್ರತಿಯೊಂದು ಕೆಲಸದಲ್ಲೂ ಪ್ರೀತಿಯಿರಲಿ:
ವಿಶೇಷ ಅಭ್ಯಾಗತರಾಗಿ ಭಾಗವಹಿಸಿದ್ದ ‘ಬ್ರಿಡ್ಜ್ ಮ್ಯಾನ್ ಇಂಡಿಯಾ’ ಎಂದು ಚಿರಪರಿಚಿತರಾಗಿರುವ ಪದ್ಮಶ್ರೀ ಪುರಸ್ಕೃತ ಸುಳ್ಯದ ಗಿರೀಶ್ ಭಾರದ್ವಾಜ್ ಅವರು ‘ಜ್ಞಾನತಂತ್ರ’ ಎಂಬ ಕೃತಿ ಬಿಡುಗಡೆ ಮಾಡಿ ಮಾತನಾಡಿ, ನಾವು ಮಾತ್ರವಲ್ಲ ನಮ್ಮ ಮುಂದಿನ ತಲೆಮಾರಿಗೂ ಬೇಕಾಗಿರುವ,ಸಾಮಾನ್ಯ ಜನರಿಗೂ ಅರ್ಥವಾಗುವ ಅಗತ್ಯ ಪುಸ್ತಕವಿದು ಎಂದು ಹೇಳಿದರು.ಸೋಲಾರ್ ಪವರ್ ಬಳಸಿ ವಿಶೇಷ ಸಾಧನೆಗೆ ಅವಕಾಶವಿದೆ.ಪ್ರತಿಯೊಂದು ಕೆಲಸದಲ್ಲೂ ಪ್ರೀತಿ ಇರಲಿ ಎಂದವರು ಹೇಳಿದರು.
ಎಸಿಸಿಇ ಮೂಲಕ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ:
ನಿರ್ಗಮಿತ ಅಧ್ಯಕ್ಷ ಪ್ರಮೋದ್ ಕುಮಾರ್ ಅವರು ಮಾತನಾಡಿ, ಸಂಘ ಪ್ರಾರಂಭ ಮಾಡಿದಾಗ 40 ಜನ ಸದಸ್ಯರಿದ್ದೆವು.ಬಳಿಕ ಸದಸ್ಯತನ 160ಕ್ಕೆ ಏರಿರುವುದು ಸಂತೋಷ.ಇದಕ್ಕೆ ಕಾರಣ ನನ್ನ ಕಾರ್ಯಕಾರಿ ಸಮಿತಿ ಸದಸ್ಯರ ಸಹಕಾರ.ಸಂಘದ ಮೂಲಕ ವೃತ್ತಿಪರ ಇಂಜಿನಿಯರ್ಗಳಿಗೆ ಹಲವಾರು ಕಾರ್ಯಕ್ರಮ ಮಾಡಿದ್ದೇವೆ.ಪುಡಾ, ನಗರಸಭೆ ಮಾಡುವ ನಕ್ಷೆಗಳ ಕುರಿತು ಕಾರ್ಯಾಗಾರ ಸಹಿತ ಇಪಿಎಲ್ 2 ಕೆಲಸವನ್ನೂ ಮಾಡಿದ್ದೇವೆ.ಈ ಎಲ್ಲಾ ಕಾರ್ಯಚಟುವಟಿಕೆಗಳನ್ನು ಗುರುತಿಸಿ ನಮಗೆ ರಾಷ್ಡ್ರಮಟ್ಟದ ಪ್ರಶಸ್ತಿ ಲಭಿಸಿದೆ.ಎಲ್ಲಾ ಸದಸ್ಯರ ಶ್ರಮದಿಂದ ಇದನ್ನು ಸಾಽಸಲಾಯಿತು.ಪುತ್ತೂರಿನಲ್ಲಿ ಪೇಸ್ನ ಸ್ಪೂರ್ತಿ ಇಂಜಿನಿಯರ್ಗಳಿಗಿದೆ.ಅದೇ ರೀತಿ ನಮಗೆ ರಾಷ್ಡ್ರ ಮಟ್ಟದಲ್ಲಿ ಕೆಲಸ ಮಾಡಲು ಎಸಿಸಿಇ ಮೂಲಕ ಆಗಿದೆ.ಮುಂದೆ ಸುಳ್ಯದಲ್ಲಿ ನೂತನ ಘಟಕ ಆರಂಭಗೊಳ್ಳಲಿದೆ.ಈ ನಿಟ್ಟನಲ್ಲಿ ನೂತನ ಪದಾಧಿಕಾರಿಗಳಿಗೆ ಸಂಘದ ಮೂಲಕ ಇನ್ನಷ್ಟು ಸಾಧನೆಗೆ ಶಕ್ತಿಯನ್ನು ಭಗವಂತ ನೀಡಲಿ ಎಂದರು.
ನಾವು ಲೋಕೋಪಯೋಗಿಗಳು: ನೂತನ ಅಧ್ಯಕ್ಷರಾಗಿ ಪದಪ್ರದಾನ ಸ್ವೀಕರಿಸಿದ ಶಿವರಾಮ ಮತಾವು ಅವರು ಮಾತನಾಡಿ, ದೇಶಾದ್ಯಂತ ೫೦ಕ್ಕೂ ಹೆಚ್ಚು ಎಸಿಸಿಇ ಸಂಘಗಳಿವೆ.ನಾವು ಜನರ ಮಧ್ಯೆ ವ್ಯವಹರಿಸುವವರು.ಈ ನಿಟ್ಟಿನಲ್ಲಿ ನಾವು ಲೋಕೋಪಯೋಗಿಗಳಾಗಿ ಕೆಲಸ ನಿರ್ವಹಿಸಬೇಕು.ಪ್ರಸ್ತುತ ದಿನಗಳಲ್ಲಿ ಆಧುನಿಕ ತಂತ್ರಜ್ಞಾನಗಳು ಅವಿಷ್ಕಾರಗೊಂಡಿವೆ.ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಇವತ್ತು ಕಲ್ಲು ಮತ್ತು ಹೊಯಿಗೆ ಅಭಾವದಿಂದ ಸಮಸ್ಯೆ ಇರಬಹುದು.ಆದರೆ ಇಂಜಿನಿಯರ್ಗಳಾದ ನಾವು ಸಮಸ್ಯೆಗಳಿಗೆ ಸ್ಪಂದಿಸಬೇಕು.ಸ್ಥಳೀಯ ಮಟ್ಟದ ಕೌಶಲ್ಯಗಳಿಗೆ ಆದ್ಯತೆ ಕೊಡಬೇಕು. ಸರ್ ಎಂ ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆಗಳು.ನನಗೆ ನೀಡಿದ ಜವಾಬ್ದಾರಿಯಲ್ಲಿ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದವರು ತಿಳಿಸಿದರು.
ಹಿರಿಯ ಇಂಜಿನಿಯರ್ಗಳಿಬ್ಬರಿಗೆ ಸನ್ಮಾನ:
ಹಿರಿಯ ಸಿವಿಲ್ ಇಂಜಿನಿಯರ್ಗಳಾದ ನೆಲ್ಯಾಡಿಯ ಶಿವಣ್ಣ ಹೆಗ್ಡೆ ಮತ್ತು ಪುತ್ತೂರು ಕನ್ಸ್ಟ್ರಕ್ಷನ್ನ ವಸಂತ ಭಟ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಲಿತ ವಿದ್ಯೆಯಲ್ಲಿ ಸಾರ್ಥಕತೆ ಕಂಡಿದ್ದೇನೆ: ಸನ್ಮಾನಿತ ಶಿವಣ್ಣ ಹೆಗ್ಡೆ ಅವರು ಮಾತನಾಡಿ ಈ ಗೌರವ ನನ್ನ ವೃತ್ತಿಯನ್ನು ಸದೃಢ, ಆಧುನೀಕರಣ,ಕೌಶಲ್ಯ ಇನ್ನಷ್ಟು ವೃದ್ಧಿಗೊಳಿಸುವಲ್ಲಿ ಸಹಕಾರಿಯಾಗಿದೆ.ಕಲಿತ ಕಾಲೇಜಿನ ಕನ್ಸ್ಟ್ರಕ್ಷನ್, ಬಹುತೇಕ ಗುರುಗಳ ಮನೆ ನಿರ್ಮಾಣ ಮಾಡುವ ಕಾರ್ಯ ದೊರೆತಿದೆ.ಈ ಮೂಲಕ ಕಲಿತ ವಿದ್ಯೆಯಲ್ಲಿ ಸಾರ್ಥಕತೆ ಕಂಡಿದ್ದೇನೆ ಎಂದರು.
ಜೀವನದಲ್ಲಿ ನಿಮ್ಮನ್ನು ನೆನೆಸುವಂತಹ ಕೆಲಸ ಮಾಡಿ:
ಸನ್ಮಾನಿತ ವಸಂತ ಭಟ್ ಅವರು ಮಾತನಾಡಿ ವೃತ್ತಿಪರವಾಗಿ ನಮ್ಮನ್ನು ನಾವು ತೊಡಗಿಸಿಕೊಂಡು ಹಲವು ಸಮಯ ಜನರು ನಮ್ಮನ್ನು ಸ್ಮರಿಸುವಂತಾಗಬೇಕೆಂಬುದು ನನ್ನ ಆಶಯ.ಕೆಂಪುಕಲ್ಲು ,ಶಿಲೆಕಲ್ಲುಗಳನ್ನೇ ಸಾಧ್ಯವಾದಷ್ಟು ಮಟ್ಟಿಗೆ ಬಳಸಿ ಕಾಂಕ್ರೀಟ್ ಕಡಿಮೆ ಮಾಡಿ ಎಂದು ಸಲಹೆ ನೀಡಿದರು.ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದರೆ ಜೀವನದಲ್ಲಿ ನಿಮ್ಮನ್ನು ನೆನೆಸುವಂತಹ ಕೆಲಸ ಮಾಡಿ ಎಂದರು.ಜಯಪ್ರಕಾಶ್ ಮತ್ತು ನರಸಿಂಹ ಪೈ ಸನ್ಮಾನ ಪತ್ರ ವಾಚಿಸಿದರು.
‘ಜ್ಞಾನತಂತ್ರ’ ಕೃತಿ ಬಿಡುಗಡೆ:
ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಮುಖರಾಗಿರುವ ಸಂಘದ ಸದಸ್ಯ ಅಜಿತ್ ಹೆಬ್ಬಾರ್ ಹೊಸಮಠ ಅವರು ತಾಂತ್ರಿಕ ವಿಚಾರಕ್ಕೆ ಸಂಬಂಽಸಿ ರಚಿಸಿದ,ನೂರಕ್ಕೂ ಹೆಚ್ಚು ಬರಹಗಳಿರುವ ಜ್ಞಾನ ತಂತ್ರ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.ಈ ಸಂದರ್ಭ ಮುನ್ನುಡಿ ಬರಹಗಾರ ವಾಸುದೇವ, ಹಿನ್ನುಡಿ ಬರಹಗಾರ ಕರುಣಾಕರ ಗೋಗಟೆ ಅವರು ಸಾಂದರ್ಭಿಕ ಮಾತನಾಡಿದರು.
ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಬ್ಬರಿಗೆ ಗೌರವ:
ಅತ್ಯುತ್ತಮ ಅಂಕ ಗಳಿಕೆ ಸಾಧನೆಗಾಗಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಲಿಖಿತ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಜ್ಯೋತಿಕಾ ಅವರನ್ನು ಸನ್ಮಾನಿಸಲಾಯಿತು.ಇಂಜಿನಿಯರ್ ಸುರೇಖಾ ಅಭಿಷೇಕ್ ಸನ್ಮಾನಿತರನ್ನು ಪರಿಚಯಿಸಿದರು.ನಿರ್ಗಮಿತ ಕಾರ್ಯದರ್ಶಿ ವಿನೋದ್ ಕುಮಾರ್ ಅವರು ವೀಡಿಯೊ ಪ್ರಸಾರದೊಂದಿಗೆ ವರದಿ ವಾಚಿಸಿದರು.ನೂತನ ಕಾರ್ಯದರ್ಶಿ ಶಿವಪ್ರಸಾದ್, ಸದಸ್ಯ ಶ್ರೀಕರ ಕಲ್ಲೂರಾಯ ಅತಿಥಿಗಳನ್ನು ಪರಿಚಯಿಸಿದರು.ಕೋಶಾಧಿಕಾರಿ ಚೇತನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸದಸ್ಯ ಕೃಷ್ಣರಾಜ್ ಪ್ರಾರ್ಥಿಸಿದರು.ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಇದರ ನಿರ್ಗಮಿತ ಅಧ್ಯಕ್ಷ ಪ್ರಮೋದ್ ಕೆ ಅವರು ಸ್ವಾಗತಿಸಿದರು.ಆದರ್ಶ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಸಾಧನೆಯ ಕುರಿತ ಚಿತ್ರಣವನ್ನು ಎಲ್ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.ಬಳಿಕ ಕಾರ್ಯಕ್ರಮ ಉದ್ಘಾಟನೆ ಮತ್ತು ಸರ್ ಎಮ್ ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.ಕಾರ್ಯಕ್ರಮದ ಕೊನೆಯಲ್ಲಿ ನಿರ್ಗಮಿತ ಅಧ್ಯಕ್ಷ ಪ್ರಮೋದ್ ದಂಪತಿಯನ್ನು ಸಂಘದ ಎಲ್ಲಾ ಸದಸ್ಯರು ಬೃಹತ್ ಮಾಲಾರ್ಪಣೆಯಿಂದ ಗೌರವಿಸಿದರು.ಸರತಿ ಸಾಲಿನಲ್ಲಿ ಬಂದ ಸದಸ್ಯರು ಹೂ ನೀಡಿ ಗೌರವಿಸಿದರು.